ಸಂವಿಧಾನ ಜಾಗೃತಿ ರಥ ಯಾತ್ರೆಗೆ ಭವ್ಯ ಸ್ವಾಗತ

A grand welcome for the Constitution Awareness Chariot Yatra
ಜಮಖಂಡಿ ತಾಲೂಕಿನ ಮೈಗೂರದಲ್ಲಿ ಸಂವಿಧಾನ ಜಾಗೃತಿ ರಥ ಯಾತ್ರೆ ಭವ್ಯ ಮೆರವಣಿಗೆ ನಡೆಯಿತು.
Published on

ಜಮಖಂಡಿ: ತಾಲೂಕಿನ ಮೈಗೂರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು.

ಗ್ರಾಮದ ಬಸ್ ನಿಲ್ದಾಣದ ಹತ್ತಿರ ರಥ ಯಾತ್ರೆಯಲ್ಲಿನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಪೂಜೆ ಸಲ್ಲಿಸುವುದರೊಂದಿಗೆ ಗ್ರಾಮದ ಪ್ರಮುಖರು ಬರಮಾಡಿಕೊಂಡರು.

ಕೆಪಿಎಸ್‌ಸಿ ಶಾಲೆಯ, ಶಿವಾನಂದ ಕಾನ್ವೆಂಟ್ ಶಾಲೆ ವಿದ್ಯಾರ್ಥಿಗಳ ಪುಷ್ಪಾರ್ಚನೆಯೊಂದಿಗೆ ಗ್ರಾಮದ ಶಿವಾನಂದ ಮಠದವರೆಗೆ ಭವ್ಯ ಮೆರವಣಿಗೆ ನಡೆಸಿದರು.

ನೋಡಲ್ ಅಧಿಕಾರಿ ಎಸ್.ಆರ್. ಬಾಡಗಿ, ಸಮಾಜ ಕಲ್ಯಾಣಾಧಿಕಾರಿ ಸಿ.ಎಸ್. ಗಡ್ಡದೇವರಮಠ, ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಕುಲಗೋಡ, ಉಪಾಧ್ಯಕ್ಷ ಸಚಿನ್ ಶಿಂಗೆ, ಪಿಡಿಒ ಕೆ.ಬಿ. ಕೀಜಿ, ವಕೀಲ ದೊಡಮನಿ, ಸಂಗಪ್ಪ ಪಿಡಶೆಟ್ಟಿ, ಬಿ. ಜಿ.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net