ಮುಂಡಗೋಡದಲ್ಲಿ ರಥಯಾತ್ರೆಗೆ ಅದ್ದೂರಿ ಸ್ವಾಗತ

MND RATHA YATRE
Published on

ಮುಂಡಗೋಡ: ಕರ್ನಾಟಕ ಸಂಭ್ರಮ 50ರ ಕನ್ನಡ ಜ್ಯೋತಿ ರಥಯಾತ್ರೆಗೆ ತಾಲೂಕಿನಾದ್ಯಂತ ಭಾನುವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕಲಘಟಗಿ ಮಾರ್ಗವಾಗಿ ತಾಲೂಕಿನ ಅಗಡಿ ಗ್ರಾಮಕ್ಕೆ ಆಗಮಿಸಿದ ರಥಯಾತ್ರೆಯನ್ನು ತಾಲೂಕಾಡಳಿತ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಭವ್ಯ ಮೆರವಣಿಗೆ ನಡೆಸಿ ಇಂದೂರ ಮಾರ್ಗವಾಗಿ ಮುಂಡಗೋಡಕ್ಕೆ ಆಗಮಿಸಿತು. ಪಟ್ಟಣದಲ್ಲಿ ಕನ್ನಡ ರಥವನ್ನು ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.

ಕಾತೂರ ಪಾಳಾ ಕ್ರಾಸ್​ಗಳಲ್ಲಿ ರಥಕ್ಕೆ ಪೂಜೆ ಸಲ್ಲಿಸಿ ನಂತರ ಮಳಗಿ ಗ್ರಾಮದಲ್ಲಿ ಸಂಚರಿಸಿದ ರಥವನ್ನು ರಾತ್ರಿ ಅಲ್ಲಿನ ವಸತಿ ನಿಲಯದಲ್ಲಿ ಉಳಿಸಲಾಯಿತು. ಸೋಮವಾರ ಬೆಳಗ್ಗೆ ಮಳಗಿಯಿಂದ ಶಿರಸಿ ತಾಲೂಕಿನತ್ತ ರಥ ತೆರಳಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥದ ಮೆರವಣಿಗೆ ನಡೆಸಲಾಯಿತು.

ತಹಸೀಲ್ದಾರ್ ಶಂಕರ ಗೌಡಿ, ತಾಪಂ ಅಧಿಕಾರಿ ಟಿ.ವೈ. ದಾಸನಕೊಪ್ಪ, ಪಪಂ ಮುಖ್ಯಾಧಿ ಕಾರಿ ಚಂದ್ರಶೇಖರ ಬಿ., ಸಿಪಿಐ ರಂಗನಾಥ ನೀಲಮ್ಮನವರ, ಪಪಂ ಅಧ್ಯಕ್ಷ ಜಯಸುಧಾ ಭೋವಿ, ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ವಸಂತ ಕೊಣಸಾಲಿ, ಸಿಡಿಪಿಒ. ರಾಮು ಬೈಲ್​ಸಿಮೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಪ್ರದೀಪ ಭಟ್, ವಿವಿಧ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net