

ದಾಂಡೇಲಿ: ಕರ್ನಾಟಕ ಏಕೀಕರಣಗೊಂಡ ನೆನಪಿನಲ್ಲಿ ರಾಜ್ಯಾದ್ಯಂತ ಹೊರಟ ಸುವರ್ಣ ಕರ್ನಾಟಕ ಕನ್ನಡ ಜ್ಯೋತಿ ರಥವು ಶುಕ್ರವಾರ ದಾಂಡೇಲಿ ತಲುಪಿದ್ದು, ನಗರದ ಪಟೇಲ ವೃತ್ತದಲ್ಲಿ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು.
ನಗರಾಡಳಿತ ಹಾಗೂ ತಾಲೂಕಾಡಳಿತದವರು ಕನ್ನಡ ರಥಕ್ಕೆ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಸಿದ್ದಿಗಳ ಡಮಾಮಿ ಕುಣಿತ ಹಾಗೂ ಶಾಲಾ ಮಕ್ಕಳ ಆಕರ್ಷಕ ಜನಪದ ವೇಷ ಭೂಷಣಗಳ ಜೊತೆ ಜೆ.ಎನ್. ರಸ್ತೆಯಿಂದ ನಗರಸಭೆವರೆಗೆ ಭವ್ಯ ಮೆರವಣಿಗೆ ನಡೆಯಿತು.
ನಗರಸಭೆ ಅಧ್ಯಕ್ಷ ಅಷ್ಪಾಕ್ ಶೇಖ್, ತಹಸೀಲ್ದಾರ್ ಶೈಲೇಶ ಪರಮಾನಂದ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರ ಸಾಂರ್ದಭಿಕವಾಗಿ ಮಾತನಾಡಿ, ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ದುಡಿದವರನ್ನು ಸ್ಮರಿಸಿದರು.
ಪೌರಯುಕ್ತ ರಾಜಾರಾಂ ಪವಾರ, ತಾಪಂ ಪ್ರಭಾರ ಇಒ ಪ್ರಮೋದ ಮಹಾಲೆ, ಸಿಪಿಐ ಭೀಮಣ್ಣ ಸೂರಿ, ನಗರಸಭೆ ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಕಾಗದ ಕಾರ್ಖಾನೆ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಬಿಜೆಪಿ ಅಧ್ಯಕ್ಷ ಬುದ್ದಿವಂತ ಗೌಡ ಪಾಟೀಲ, ನಗರಸಭೆ ಸದಸ್ಯರಾದ ಸಂಜಯ ನಂದ್ಯಾಳಕರ, ದಶರಥ ಬಂಡಿವಡ್ಡರ, ಶಾಹೀದಾ ಪಠಾಣ, ಅನಿಲ ನಾಯ್ಕರ, ರುಹಿನಾ ಖತೀಬ್, ರಮಾ ರವೀಂದ್ರ ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮುರ್ತಜಾ ಹುಸೇನ ಆನೆಹೊಸೂರ, ತಾಲೂಕಾಧ್ಯಕ್ಷ ನಾರಾಯಣ ನಾಯ್ಕ, ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ವಿವಿಧ ಸಂಘ ಸಂಸ್ಥೆಗಳ, ಶಾಲೆಗಳ ಮುಖ್ಯಸ್ಥರು, ಇತರರಿದ್ದರು.