ಗ್ರಾಮದೇವತೆ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ

nltd 20-1 jatre
ಜೋಡಿ ದ್ಯಾಮವ್ವ ಗ್ರಾಮ ದೇವತೆಗಳ ಜಾತ್ರೆ ನಿಮಿತ್ತ ಮೆರವಣಿಗೆಗೆ ಚಾಲನೆ ನೀಡಲಾಯಿತು.
Published on

ನಾಲತವಾಡ: ಮೂರು ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಆರಾಧ್ಯ ದೈವ ಜೋಡಿ ದ್ಯಾಮವ್ವ ಗ್ರಾಮ ದೇವತೆಗಳ ಜಾತ್ರೆ ಮಂಗಳವಾರ ದೇವಿಯರಿಗೆ ದೇಶಮುಖ, ನಾಡಗೌಡ ಧಣಿಗಳ ಮನೆತನದಿಂದ ಉಡಿ ತುಂಬಿ ನಾಲ್ಕು ದಿನಗಳ ಗ್ರಾಮದೇವತೆ ಜಾತ್ರೆಗೆ ಅಧಿಕೃತ ಚಾಲನೆ ನೀಡಲಾಯಿತು.

ಮಂಗಳವಾರ ಬೆಳಗ್ಗೆ 6 ಗಂಟೆಗೆ ಗಂಗಸ್ಥಳದಲ್ಲಿ ಊರು ಗೌಡಕಿಯ ಬಿ.ಬಿ. ಪಾಟೀಲ ಕುಟುಂಬದಿಂದ ದೇವಿಯರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪಟ್ಪಣದ ಬಸವೇಶ್ವರ ವೃತ್ತ, ಗಣಪತಿ ಚೌಕ ಮಾರ್ಗವಾಗಿ ಸಾಗಿದ ಮೆರವಣಿಗೆ ಅಗಸಿಯ ಬಡ್ಡಿ ಗಲ್ಲಿಗೆ ಪೂಜೆ ಸಲ್ಲಿಸಿ ಕಾರ್ಣಿಕ ಹೇಳಿಕೆ ಬಳಿಕ ಮೆರವಣಿಗೆ ಹೇಮರಡ್ಡಿ ಮಲ್ಲಮ್ಮ ವೃತ್ತದಿಂದ ಸಾಗಿ ಗ್ರಾಮದೇವತೆ ದೇಗುಲದ ಕಟ್ಟೆ ಮೇಲೆ ಪ್ರತಿಷ್ಠಾಪಿಸಲಾಯಿತು. ವಿವಿಧ ಕಲಾತಂಡಗಳಾದ ಡೊಳ್ಳು ಕುಣಿತ, ಕರಡಿ ಮಜಲು, ಶಹನಾಯಿ, ಹಲಗೆ ಮೇಳ, ಬೃಹತ್ ಗೊಂಬೆಗಳು ಜನಾಕರ್ಷಿಸಿದವು. ಮಹಿಳೆಯರು ಪೂರ್ಣಕುಂಭ, ಕಳಸ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರು ದೇವಯರಿಗೆ ನೈವೇದ್ಯ ಅರ್ಪಿಸಿ ಹರಕೆ ತೀರಿಸಿದರು.

ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ, ಸ್ಪರ್ಧೆಗಳು ನಡೆಯಲಿವೆ.

ಪೃಥ್ವಿರಾಜ್ ನಾಡಗೌಡ, ಶಂಕರಾವ ದೇಶಮುಖ, ಗುರುಪ್ರಸಾದ ದೇಶಮುಖ, ಎಂ.ಎಸ್.ಪಾಟೀಲ, ಬಾಬಾಸಾಹೇಬ ದೇಶಮುಖ, ಅಮರ ದೇಶಮುಖ, ಬಾಪುಗೌಡ ಪಾಟೀಲ, ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ರಾಜು ಗಂಗನಗೌಡರ, ಪರಸಣ್ಣ ಕಸಬೇಗೌಡರ, ಸಂಗಪ್ಪ ಹಂಪನಗೌಡರ, ಲಕ್ಷ್ಮಣ ಜೋಗಿ, ಮಲ್ಲಪ್ಪ ಬಡೀಗೆರ, ಬಸಪ್ಪ ಬರಮೈ, ಸಂಗಮೇಶ ಗಂಗನಗೌಡ್ರ, ಪ್ರಭು ಡೇರೆದ, ಚಂದ್ರಶೇಖರ ಮೇಟಿ ಸೇರಿ ಪಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net