ಜೈಂಟ್ಸ್ ಶಾಲೆಯಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ

h16-giants school
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಜೈಂಟ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸಲಾಯಿತು.

ನರ್ಸರಿ, ಎಲ್‌ಕೆಜಿ, ಯುಕೆಜಿ ಮಕ್ಕಳು ಕೃಷ್ಣ -ರಾಧೆ ವೇಷೆ ಧರಿಸಿ ಗಮನ ಸೆಳೆದರು. ಶಿಕ್ಷಕರು, ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು.

ಶಾಲೆ ಅಧ್ಯಕ್ಷ ಪರಶುರಾಮ ಉಟವಾಲೆ, ಕಾರ್ಯದರ್ಶಿ ವಿಜಯ ಕುಲಕರ್ಣಿ, ಮಾಜಿ ಅಧ್ಯಕ್ಷ ಜಿ.ಎಸ್. ನಾಯಕ, ಆಡಳಿತಾಧಿಕಾರಿ ಉಮಾ ಪಾಟೀಲ, ಪ್ರಾಚಾರ್ಯ ಬಸವರಾಜ ಚಟ್ನಿ, ಪರೀಕ್ಷತ ರಾಣ್ಯ, ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net