ಏ.೦೬ ರಂದು ಬೃಹತ್ ಶೋಭಾಯಾತ್ರೆ

RAMU NAYAK
RAMU NAYAK
Published on

ರಾಯಚೂರು ಶ್ರೀ ಭಜರಂಗಿ ಯುವಸೇನಾ ಸಮಿತಿಯಿಂದ ಏ.೦೬ರ ಶ್ರೀ ರಾಮನವಮಿ ನಿಮಿತ್ತ ಸಂಜೆ ೦೪ ಗಂಟೆಗೆ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆಂದು ಸಮಿತಿ ಸದಸ್ಯ ರಾಮು ನಾಯಕ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೭ ವರ್ಷಗಳಿಂದ ಶ್ರೀರಾಮನವಮಿ ಅಂಗವಾಗಿ ಶೋಭಾಯಾತ್ರೆ ಆಯೋಜನೆ ಮಾಡಲಾಗುತ್ತಿದೆ. ಅಂದು ನಗರದ ಶ್ರೀ ಕೋದಂಡ ರಾಮ ದೇವಸ್ಥಾನದಿಂದ ಪ್ರಾರಂಭವಾಗುತ್ತದೆ. ಈ ಬಾರಿ ೧೪ ಅಡಿಯ ನೂತನ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಶ್ರೀರಾಮಚಂದ್ರ , ಹನುಮಾನ ವಿಗ್ರಹಗಳ ಮೆರೆವಣಿಗೆ ನಡೆಯಲಿದ್ದು, ಹಂಪಿ, ಕೊಟ್ಟೂರು ಬ್ಯಾಂಡ್, ಅಘೋರಿ ವೇಷಧಾರಿಗಳು, ಕಾಲಬೈರವ್ ವೇಷಧಾರಿಗಳು, ಸಕಲ ವಾಧ್ಯಗಳೊಂದಿಗೆ ಮೆರವಣಿಗೆ ನಡೆಯಲಿದುದ ಶ್ರೀರಾಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿಎ.ರಾಮು, ಸಂತೋಷರೆಡ್ಡಿ, ಗೋವಂದರೆಡ್ಡಿ, ಉದಯಕುಮಾರ, ಸತೀಶ, ಭೀಮೇಶ ಸಾಗರ, ರಾಜೇಶ, ಭೀಮೇಶ ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net