ಕರಡಿಗುಡ್ಡದಲ್ಲಿ ಶ್ರೀರಾಮನ ಭಾವಚಿತ್ರದ ಭವ್ಯ ಮೆರವಣಿಗೆ

21 UPBR 2
Published on

ಉಪ್ಪಿನಬೆಟಗೇರಿ: ಅಯೋಧ್ಯೆಯಲ್ಲಿ ಜ.22 ರಂದು ಬಾಲ ರಾಮಚಂದ್ರನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಂದಿರ ಲೋಕಾರ್ಪಣೆ ಅಂಗವಾಗಿ ಭಾನುವಾರ ಕರಡಿಗುಡ್ಡ ಗ್ರಾಮದಲ್ಲಿ ರಾಮನ ಭಾವಚಿತ್ರದ ಭವ್ಯ ಮೆರವಣಿಗೆ ವಿಜ್ರಂಭಣೆಯಿಂದ ಜರುಗಿತು.


ಗ್ರಾಮದ ದ್ಯಾಮವ್ವ-ದುರ್ಗವ್ವ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು. ಜಾಂಜ್ ಮೇಳ, ಕೋಲಾಟ ಸೇರಿದಂತೆ ಸಕಲ ಮಂಗಳ ವಾದ್ಯಗಳು ಮೆರವಣಿಗೆಗೆ ಮೆರಗು ತಂದವು. ಮಹಿಳೆಯರು ಪೂರ್ಣಕುಂಭ ಆರತಿ ತಟ್ಟೆಗಳೊಂದಿಗೆ ಪಾಲ್ಗೊಂಡಿದ್ದರು. ಚಿಕ್ಕ ಮಕ್ಕಳು ರಾಮ, ಸೀತೆ, ಲಕ್ಷ್ಮಣ, ಹನುಮಂತನ ವೇಶ ಧರಿಸಿ ನೆರೆದವರ ಗಮನ ಸೆಳೆದರು. ಪಾಲ್ಗೊಂಡ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.


ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಹೊಸೂರ, ಬಸವರಾಜ ಗುತ್ತೆಪ್ಪನವರ, ಮಲ್ಲಿಕಾರ್ಜುನ ಜಕ್ಕಣ್ಣವರ. ಶಿವಯೋಗಿ ಚಿಕ್ಕಮಠ, ಅಡಿವೆಪ್ಪ ಬಾಚಗುಂಡಿ, ಮಲ್ಲಿಕಾರ್ಜುನ ಕೆಂಪಸಣ್ಣವರ, ಬಸವರಾಜ ಬಾಚಗುಂಡಿ, ಕುಮಾರ ಸ್ವಾಮಿ, ಶಿವಪ್ಪ ಸಾಲಿ ಸೇರಿದಂತೆ ರಾಮಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net