ಮಹರ್ಷಿ ವಾಲ್ಮೀಕಿ ಭಾವಚಿತ್ರದ ಬೃಹತ್ ಮೆರವಣಿಗೆ

VALMIKI MERAVANIGE
ವಿಜಯಪುರ ನಗರದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆಯಲ್ಲಿ ಗೊಂಬೆ ಕುಣಿತದ ಕಲಾವಿದರು ಗಮನ ಸೆಳೆದರು.
Published on

ವಿಜಯಪುರ: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಭಾವಚಿತ್ರದ ಬೃಹತ್ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು.

ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಮಹಾತ್ಮ ಗಾಂಧಿ, ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್, ಸಂತ ಕನಕದಾಸ ವೃತ್ತದ ಮಾರ್ಗವಾಗಿ ರಂಗಮಂದಿರ ತಲುಪಿತು. ಮಾರ್ಗದುದ್ದಕ್ಕೂ ಗೊಂಬೆ ಕುಣಿತ, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯಮೇಳ ಹಾಗೂ ಕಲಾ ತಂಡಗಳು ಆಕರ್ಷಕ ಪ್ರದರ್ಶನ ನೀಡಿದರು. ವಾಲ್ಮೀಕಿ ಮತ್ತು ತಳವಾರ ಸಮುದಾಯದವರು ಬಾವುಟ ಹಿಡಿದು ರಾರಾಜಿಸಿದರು. ವಾಲ್ಮೀಕಿ ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಬಾವುಟಗಳು ರಾರಾಜಿಸಿದವರು. ಜೈ ತಳವಾರ ಎಂಬ ಘೋಷ ವಾಕ್ಯದೊಂದಿಗೆ ನೂರಾರು ಯುವಕರು ಸಮವಸ್ತ್ರ ಧರಿಸಿ ಗಮನ ಸೆಳೆದರು.

ಎಎಸ್‌ಪಿ ಶಂಕರ ಮಾರಿಹಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಎಸ್. ಗುಣಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಜೆ. ಇಂಡಿ, ಜಿಲ್ಲಾ ಸಂಖ್ಯೆ ಸಂಗ್ರಹಣಾ ಇಲಾಖೆಯ ಪ್ರಭಾರ ಅಧಿಕಾರಿ ಅಲ್ತಾಪ ಅಹ್ಮದ್ ಬಿ. ಮಣಿಯಾರ ಮುಖಂಡರಾದ ಸಿದ್ಧರಾಮ ಕೋಳಿ, ಅಂಬಣ್ಣ ನಾಟಿಕರ, ಮಲ್ಲಿಕಾರ್ಜುನ ಬಟಗಿ, ರವಿ ಬಿಸನಾಳ, ಅಮರೇಶ ಕಾಮನಕೇರಿ, ಸೋಮು ಜಮಾದಾರ, ಸಂಜೀವಕುಮಾರ ನಾಯ್ಕೋಡಿ, ಶರಣಗೌಡ ಪಾಟೀಲ, ನಿಂಗಪ್ಪ ನಾಟೀಕಾರ, ಈರಪ್ಪ ಯಡಹಳ್ಳಿ, ವಿಶ್ವನಾಥಗೌಡ ಬಟಗಿ, ಅಮಿತ ನಾಯ್ಕೋಡಿ, ಪರಶುರಾಮ ದಿಂಡವಾರ, ಸಾಯಬಣ್ಣ ಬಾಗೇವಾಡಿ, ವಿವೇಕಾನಂದ ಡಬ್ಬಿ, ಮಲ್ಲು ತಳವಾರ, ಪ್ರಕಾಶ ಗುಡಿಮನಿ, ಚಂದ್ರು ತಳವಾರ, ಸಿದ್ಧರಾಮ ತಳವಾರ, ದೇವೇಂದ್ರ ಮೆರೇಕರ್, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ, ವಿದ್ಯಾವತಿ ಅಂಕಲಗಿ, ಸಿದ್ದು ರಾಯಣ್ಣವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net