ಹಿರೇಕೆರೂರಲ್ಲಿ ದೇವರ ಮೂರ್ತಿ, ಕಳಸದ ಅದ್ದೂರಿ ಮೆರವಣಿಗೆ

HKR Meravanige
Published on

ಹಿರೇಕೆರೂರ: ಪಟ್ಟಣದ ಪೊಲೀಸ್ ಮೈದಾನದಲ್ಲಿ ನೂತನವಾಗಿ ನಿರ್ವಣಗೊಂಡ ವಿಘ್ನೕಶ್ವರ, ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿಮಿತ್ತ ದೇವರ ಮೂರ್ತಿಗಳನ್ನು ಶುಕ್ರವಾರ ಜಿ.ಬಿ. ಶಂಕರಾವ್ ವೃತ್ತದಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.

ಬೆಳಗ್ಗೆ 9ಕ್ಕೆ ಮೂರ್ತಿಗಳು, ಕಳಸದ ಮೆರವಣಿಗೆ ಹಾಗೂ ಮುರ್ಡೆಶ್ವರದ ಚಂಡಿಕಾ ವಾದ್ಯ, ಕನವಳ್ಳಿಯ ಗೊಂಬೆಗಳ ಕುಣಿತ ಹಾನಗಲ್ಲನ ಸುಗಂಧಿ ಕಲಾ ತಂಡದ ಕಹಳೆ ಮತ್ತು ಪೂರ್ಣ ಕುಂಭ ಮೇಳಗಳೊಂದಿಗೆ ದೇವಸ್ಥಾನವರೆಗೆ ಸಾಗಿತು. ನಂತರ ಸಂಜೆ ಎರಡೂ ಮೂರ್ತಿಗಳಿಗೆ ಧಾರವಾಡದ ಸಂತೋಷ ಭಟ್ ಹಾಗೂ ಸಂಗಡಿಗರಿಂದ ಜಲಾಧಿವಾಸ, ಧಾನ್ಯಾಧಿವಾಸ, ವಸ್ತ್ರಾಧಿವಾಸ, ಶಯಾಧಿವಾಸ ಹಾಗೂ ನವಗ್ರಹ ಸಹಿತ ವಾಸ್ತು ಹೋಮ ನೆರವೇರಿತು.

ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಯು.ಬಿ. ಬಣಕಾರ ಮಾತನಾಡಿ, ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಅಲ್ಲಿದ್ದ ಪುರಾತನ ದೇವಸ್ಥಾನ ತೆರವುಗೊಳಿಸಿ ಭಕ್ತರು, ವಿವಿಈ ಇಲಾಖೆ, ಸಂಘಸಂಸ್ಥೆಗಳ ವಂತಿಗೆಯಿಂದ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಶಿಲಾ ದೇವಸ್ಥಾನ ನಿರ್ವಿುಸಲಾಗಿದೆ ಎಂದರು.

ದೇವಸ್ಥಾನ ಜೀಣೋದ್ಧಾರ ಸಮಿತಿ ಅಧ್ಯಕ್ಷ ವಿಜಯಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್.ಪಾಟೀಲ, ಪಪಂ ಅಧ್ಯಕ್ಷೆ ಸುಧಾ ಚಿಂದಿ, ಉಪಾಧ್ಯಕ್ಷ ರಾಜು ಕರಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಸಿಪಿಐ ಬಸವರಾಜ ಪಿ.ಎಸ್., ಪಿಎಸ್​ಐ ನೀಲಪ್ಪ ನರನಾಲ, ಕೆಎಂಎಫ್ ನಿರ್ದೇಶಕ ಉಜನೆಪ್ಪ ಮಾವಿನತೋಪ, ಎಸ್.ಬಿ. ತಿಪ್ಪಣ್ಣನವರ, ಹನುಮಂತಣ್ಣ ಭರಮಣ್ಣನವರ, ಲೋಕಪ್ಪ ಸಂಕೋಳ್ಳಿ, ಸತೀಶ ನಾಡಿಗೇರ, ರುದ್ರಮುನಿ ಹುಲ್ಮನಿ, ಬಸವರಾಜ ಕಾಲ್ವಿಹಳ್ಳಿ, ಮಂಜುನಾಥ ತಂಬಾಕದ, ಜಿ.ಪಿ. ಪ್ರಕಾಶಗೌಡ, ದುರ್ಗಪ್ಪ ನೀರಲಗಿ, ಗಿರೀಶ ರ್ಬಾ, ಪ್ರಭು ಮಳವಳ್ಳಿ, ರವಿ ಸಿದ್ದಪ್ಪಗೌಡ್ರ, ಬಸವರಾಜ ಚಿಂದಿ, ರುದ್ರಪ್ಪ ಶೆಟ್ಟರ್, ಗುರುಮೂರ್ತಿ ನಾಡಿಗೇರ, ಪ್ರಕಾಶ ಶಿರಗಂಬಿ, ಸುರೇಶ ವೈಶ್ಯರ, ರಾಜು ತಿಪ್ಪಶೆಟ್ಟಿ, ರಾಮು ಮುರ್ಡೆಶ್ವರ ಹಾಗೂ ಭಕ್ತರು, ಪಪಂ ಸದಸ್ಯರು, ಪೋಲಿಸ್ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net