

ವಾಡಿ; ನವರಾತ್ರಿ ನಿಮಿತ್ತ ಪಟ್ಟಣದ ರೈಲ್ವೆ ಕಾಲನಿಯಲ್ಲಿ ಸಾಂಪ್ರದಾಯಿಕವಾಗಿ ದೇವಿಯ ಮೂರ್ತಿಯನ್ನು ಭಾನುವಾರ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.
ಸುಳೆ ಅವರ ಮನೆಯಿಂದ ರೈಲ್ವೆ ಕಾಲನಿವರೆಗೂ ದೇವಿ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಯುವಕರ ನೃತ್ಯ ಗಮನಸೆಳೆಯಿತು. ದೇವಿಯ ಗೀತೆಗಳು ಹಾಗೂ ಡಿಜೆ ಸೌಂಡ್ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತು. ಬಿರ್ಲಾ ಕಾಲನಿ, ಕುನ್ನೂರ್ ಚೌಕ್, ಮೌಲಾನಾ ಆಜಾದ್ ಚೌಕ್, ಶಿವಾಜಿ ಚೌಕ್, ಗಾಂಧಿ ಚೌಕ್, ಡಾ.ಅಂಬೇಡ್ಕರ್ ವತ್ತ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೈಲ್ವೆ ಕಾಲನಿ ತಲುಪಿ ಸಮಾಪ್ತಿಗೊಂಡಿತು.
ಕಾಲನಿಯಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆಸುವ ಮೂಲಕ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. 9 ದಿನಗಳವರೆಗೆ ದೇವಿ ಮೂರ್ತಿ ವಿವಿಧ ಅಲಂಕಾರ ಮಾಡಿ ಪೂಜಿಸಲಾಗುವುದು ಎಂದು ಮಂಡಳಿ ಪ್ರಮುಖರು ಮಾಹಿತಿ ನೀಡಿದರು.
ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಪಂಚಾಳ, ರೈಲ್ವೆ ಪೊಲೀಸ್ ಅಧಿಕಾರಿಗಳಾದ ಜಿ.ಎಸ್.ಯಾದವ್, ಶರದ್ ವಲಕೆ, ಸ್ಟೇಷನ್ ಮಾಸ್ಟರ್ ಜೆ.ಎನ್.ಪರೆಡಾ, ಪ್ರಮುಖರಾದ ಟೋಪಣ್ಣ ಕೊಮಟೆ, ಸಿದ್ದಣ್ಣ ಕಲ್ಲಶೆಟ್ಟಿ, ಮಹಿಮೂದ್ ಸಾಹೇಬ್, ವಿಠ್ಠಲ್ ನಾಯಕ, ರಾಮಚಂದ್ರ ರಡ್ಡಿ, ರಮೇಶ ಕಾರಬಾರಿ, ಭಗವತ ಸುಳೆ, ಜಾಫರ್ ಸಾಬ್, ಎಂ.ಡಿ.ಇಕ್ಬಾಲ್, ಅಶೋಕ ಸೂರ್ಯವಂಶಿ, ಹರಿ ಗಲಾಂಡೆ, ಸೂರ್ಯಕಾಂತ ರz್ದೆÃವಾಡಗಿ, ಶರಣಬಸ್ಸು ಶಿರೂರಕರ್, ನಾಗೇಂದ್ರ ಜೈಗಂಗಾ, ಬಾಬು ಮಿಯ್ಯ, ವೀರಣ್ಣ ಯಾರಿ ಇತರರಿದ್ದರು.