`ಬಸವ ವಚನ' ಸಾಹಿತ್ಯದ ಭವ್ಯ ಮೆರವಣಿಗೆ

12 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಧಾರವಾಡದ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನ ಪ್ರಯುಕ್ತ ಬಸವಣ್ಣನವರ ಭಾವಚಿತ್ರ, ಮತ್ತು ಧರ್ಮಗ್ರಂಥ ವಚನ ಸಾಹಿತ್ಯದ ಬೃಹತ್ ಮೆರವಣಿಗೆ ನಗರದಲ್ಲಿ ಶನಿವಾರ ಜರುಗಿತು.

ಇಲ್ಲಿನ ಕಲಾಭವನ ಮೈದಾನ ಬಳಿ ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಸಾವಿರಾರು ಬಸವಾಭಿಮಾನಿಗಳು ಬಸವ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಕಲಾಭವನದಿ0ದ ಹೊರಟ ಬಸವ ರಥಯಾತ್ರೆಯಲ್ಲಿ ನೂರಾರು ಮಹಿಳೆಯರು ತಲೆ ಮೇಲೆ ವಚನಗಳ ಕಟ್ಟು ಹೊತ್ತು ವಚನ ಪಠಣ ಮಾಡುತ್ತ ಸಾಗಿದರು. ಮುಮ್ಮಿಗಟ್ಟಿಯ ಶಿವರುದ್ರಗೌಡ ಪಾಟೀಲ ಬಸವಣ್ಣನ ವೇಷ ಧರಿಸಿ ಕುದುರೆಯ ಮೇಲೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು ಶರಣ- ಶರಣೆಯರ ವೇಷಭೂಷಣ ಧರಿಸಿ ಗಮನ ಸೆಳೆದರು. ಭಜನಾ ತಂಡಗಳು, ವಾದ್ಯ ಮೇಳಗಳಿಂದ ವಚನ ಸಂಗೀತ ಪ್ರಸ್ತುತಗೊಂಡಿತು. ಮಹಿಳಾ ತಂಡಗಳು ಡೊಳ್ಳು, ವಿವಿಧ ವಾದ್ಯ ಬಾರಿಸುತ್ತ ಸಾಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net