ರಟ್ಟಿಹಳ್ಳಿಯಲ್ಲಿ ಅದ್ದೂರಿ ಗಣೇಶ ವಿಸರ್ಜನೆ

GANESH VISARJANE
Published on

ರಟ್ಟಿಹಳ್ಳಿ: ಪಟ್ಟಣದಲ್ಲಿ ಭಗತ್​ಸಿಂಗ್ ಗೆಳೆಯರ ಬಳಗ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಗುರುವಾರ ಬೃಹತ್ ಶೋಭಾಯಾತ್ರೆ ಮೂಲಕ ಶಾಂತಿಯುತವಾಗಿ ವಿಸರ್ಜನೆ ಮಾಡಲಾಯಿತು.
ಬೆಳಗ್ಗೆ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ ನಡೆಯಿತು. ಸಂಜೆ 6 ಗಂಟೆಗೆ ಪ್ರಾರಂಭವಾದ ಶೋಭಾಯಾತ್ರೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿ ರಾತ್ರಿ 10 ಗಂಟೆಗೆ ಕುಮುದ್ವತಿ ನದಿಯಲ್ಲಿ ಗಣೇಶನನ್ನು ವಿಸರ್ಜಿಸಲಾಯಿತು.
ಶೋಭಾಯಾತ್ರೆಯಲ್ಲಿ ಡಿಜೆ ಹಾಡಿಗೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ನ್ಯೂ ಪರಮೇಶ್ವರ ನಾಸಿಕ್ ಡೋಲ್ ಮತ್ತು ಗೊಂಬೆ ಬಳಗದಿಂದ ವಿವಿಧ ವೇಷಗಳ ಗೊಂಬೆಗಳ ಕುಣಿತ, ಹನುಮಂತನ ವೇಷ ಗಮನ ಸೆಳೆದವು.
ಹಳೇ ಬಸ್ ನಿಲ್ದಾಣ ಬಳಿ ಸ್ಥಳೀಯ ಮುಸ್ಲಿಂ ಸಮಾಜದವರು ಗಣೇಶನಿಗೆ ಮಾಲಾರ್ಪಣೆ ಮಾಡಿ ಭಾವೈಕ್ಯ ಮೆರೆದರು.
ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಆನಂದ ಪುಟ್ಟಣ್ಣನವರ, ವಿಹಿಂಪ ಪ್ರಮುಖರಾದ ಮೃತ್ಯುಂಜಯ ಬೆಣ್ಣಿ, ಶಂಕರಗೌಡ ಚೆನ್ನಗೌಡ್ರ, ನವೀನ ಮಾದರ, ವೀರನಗೌಡ ಯಡಚಿ, ವೀರನಗೌಡ ಮಕರಿ, ಬಾಬಣ್ಣ ಯಡಚಿ, ದೇವರಾಜ ನಾಗಣ್ಣನವರ, ಹನುಮಂತಪ್ಪ ಗಾಜೇರ, ಆಕಾಶಗೌಡ ಪಾಟೀಲ, ಮಂಜು ಗೌಡರ, ಜಯ ಪಾಂಡು, ಸಿದ್ದು ಹಲಗೇರಿ, ಇತರರಿದ್ದರು.
ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹೆಚ್ಚುವರಿ ಎಸ್ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್ಪಿ ಡಾ.ಗಿರೀಶ ಭೋಜಣ್ಣನವರ, ಸಿಪಿಐ ಬಸವರಾಜ ಪಿ.ಎಸ್,. ಪಿಎಸ್​ಐ ರಮೇಶ ಪಿ.ಎಸ್. ಸೇರಿ ಒಟ್ಟು 350ಕ್ಕೂ ಅಧಿಕ ಪೊಲೀಸರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net