ಅದ್ದೂರಿ ದುರ್ಗಾ ಪರಮೇಶ್ವರಿ ರಥೋತ್ಸವ

6 BKL 2
Published on

ಭಟ್ಕಳ: ತಾಲೂಕಿನ ಕಿತ್ರೆಯ ಶ್ರೀ ಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ರಥೋತ್ಸವ ಗುರುವಾರ ಅದ್ದೂರಿಯಾಗಿ ನೆರವೇರಿತು.

ರಥೋತ್ಸವದ ಧಾರ್ವಿುಕ ಕಾರ್ಯಕ್ರಮಗಳು ದೇವಸ್ಥಾನದ ತಾಂತ್ರಿಕ ವೇ.ಮೂ. ಅಮೃತೇಶ ಭಟ್ಟ ಗೋಕರ್ಣ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಬಾಲಚಂದ್ರ ಭಟ್ಟ ನೇತೃತ್ವದಲ್ಲಿ ಸಾಂಗವಾಗಿ ಜರುಗಿತು.

ನೂರಾರು ಜನರು ರಥ ಕಾಣಿಕೆ ಸಲ್ಲಿಸಿದರು. ಗುರುವಾರ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಗಣೇಶ ಪೂಜೆ, ಪುಣ್ಯಾಹ, ರುದ್ರಹವನದ ಮಹಾಸಂಕಲ್ಪ, ಶ್ರೀ ದೇವರಿಗೆ ಕಲಾವೃದ್ಧಿ- ಯಾದಿ ಹವನ, ವೀರಭದ್ರ ದೇವರ ಪ್ರೀತ್ಯರ್ಥ ರುದ್ರವನದ ಪೂರ್ಣಾಹುತಿ ನಡೆಯಿತು.

ದೇವಿಯ ರಜತ ಉತ್ಸವ ಮೂರ್ತಿಯನ್ನು ಸಮರ್ಪಣೆ ಕೂಡ ನೆರವೇರಿತು. ರಥೋತ್ಸವದಲ್ಲಿ ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ, ದೇವಿಮನೆ ಆಡಳಿತ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಉಪಾಧ್ಯಕ್ಷ ಪರಮೇಶ್ವರ ಭಟ್ಟ, ನಿಕಟಪೂರ್ವ ಅಧ್ಯಕ್ಷ ಶಿವಾನಂದ ಹೆಬ್ಬಾರ, ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಭಟ್ಟ ತೆಕ್ನಗದ್ದೆ, ಪ್ರಮುಖರಾದ ಎಂ.ಎಂ. ಹೆಬ್ಬಾರ್, ನಾರಾಯಣ ಹೆಬ್ಬಾರ ಬೆಣಂದೂರು, ರಾಧಾಕೃಷ್ಣ ಬೆಂಗಳೂರು, ಅನಂತ ಹೆಬ್ಬಾರ, ಗಣೇಶ ಹೆಬ್ಬಾರ, ಶ್ರೀನಿವಾಸ ಹೆಗಡೆ, ಅಶೋಕ ಭಟ್ಟ, ಗಣಪಯ್ಯ ಹೆಗಡೆ ಮುಂತಾವರು ಉಪಸ್ಥಿತರಿದ್ದರು.

ಮಧ್ಯಾಹ್ನ ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಸಂಜೆ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಕಾರ್ತಿಕ ಚಿಟ್ಟಾಣಿ ಅವರ ಸಾರಥ್ಯದಲ್ಲಿ ನಡೆದ ಪಾಂಚಜನ್ಯ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನರಂಜಿಸಿತು. ನಂತರ ಭರತ ನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net