ಅಯ್ಯನಗುಡಿ ಕಲಶೋತ್ಸವಕ್ಕೆ ಅದ್ದೂರಿ ಚಾಲನೆ

NLTD 6-1
ಅಯ್ಯನಗುಡಿ ಕಲಶೋತ್ಸವಕ್ಕೆ ಪಪಂ ಅಧ್ಯಕ್ಷ ಪೃಥ್ವಿರಾಜ ನಾಡಗೌಡ ಚಾಲನೆ ನೀಡಿದರು. ಬಸವರಾಜ ನಾಡಗೌಡ, ಗಂಗಾಧರ ನಾಡಗೌಡ, ಉಮರ್ ಾರೂಕ್ ಮೂಲಿಮನಿ, ಹಣಮಂತರಾಯ ಕುರಿ ಇತರರಿದ್ದರು.
Published on

ನಾಲತವಾಡ: ಜಾನಪದ ನಾಡೆಂದೇ ಖ್ಯಾತಿ ಪಡೆದಿರುವ ಅಯ್ಯನಗುಡಿ ಜಾತ್ರೆ, ಕಲಶೋತ್ಸವಕ್ಕೆ ನಾಡಗೌಡ ವಾಡೆಯಲ್ಲಿ ಪಪಂ ಮಾಜಿ ಅಧ್ಯಕ್ಷ ಪೃಥ್ವಿರಾಜ ನಾಡಗೌಡ ಗುರುವಾರ ಚಾಲನೆ ನೀಡಿದರು.

ನಾಡಗೌಡ ವಾಡೆಯಿಂದ ಅಯ್ಯನಗುಡಿ ಗಂಗಾಧರೇಶ್ವರ ದೇವಸ್ಥಾನದವರೆಗೆ ಕಲಶೋತ್ಸವ ಮೆರವಣಿಗೆ ನಡೆಯಿತು. ಬಬಲೇಶ್ವರದ ಕರಡಿ ಮಜಲು, ಸಾರವಾಡದ ಕೀಲು ಕುದರೆ, ನವಿಲು ಕುಣಿತ, ಕೊಲ್ಹಾರದ ಬಸವನ ಕುಣಿತ, ಸಂಗಮೇಶ ಹೊನ್ನಳಿ ಅವರಿಂದ ಕುದರೆ ಕುಣಿತ, ದಾದಾಪೀರ ಹಡಲಗೇರಿ ಬಳಗದಿಂದ ಜೋಗತಿ ಕುಣಿತ ಮೆರವಣಿಗೆಗೆ ಮೆರಗು ತಂದವು.

ಬಸವರಾಜ ನಾಡಗೌಡ, ಜಿಪಂ ಮಾಜಿ ಸದಸ್ಯ ಗಂಗಾಧರ ನಾಡಗೌಡ, ಮಹಾಂತೇಶ ಗಂಗನಗೌಡರ, ಉಮರ್ ಾರೂಕ್ ಮೂಲಿಮನಿ, ಹಣಮಂತರಾಯ ಕುರಿ, ಶಿವಪ್ಪಗೌಡ ತಾತರೆಡ್ಡಿ, ದಾವಲಸಾಬ ಸುಲ್ತಾನಪುರ, ಬಲವಂತ ಉಣ್ಣಿಭಾವಿ, ಗನಿಸಾಬ ಖಾಜಿ, ರಜಾಕ ನಾಯ್ಕೋಡಿ, ಈರಣ್ಣ ನಾಡಗೌಡ, ಲಾಳೇಮಶಾಕ್ ಅವಟಿ, ರಸೂಲ ಮಕಾಂದಾರ, ಸಂಗಮೇಶ ಗಂಗನಗೌಡರ, ಬಾಬು ಕ್ಷತ್ರಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net