ಕಾರ್ಗಿಲ್ ವಿಜಯೋತ್ಸವದ ಅದ್ದೂರಿ ಆಚರಣೆ

Kargil Vijay Divas
ಕರಡಿ ಮಜಲು, ಡೊಳ್ಳು ಕುಣಿತ, ಗೊಂಬೆ ಕುಣಿತ, ತ್ರಿವರ್ಣ ಧ್ವಜಗಳ ಹಾರಾಟ ಸೇರಿದಂತೆ ಹತ್ತು ಹಲವು ಕಲಾ ಪ್ರಕಾರಗಳು ಹಾಗೂ ಭಾರತ ಮಾತೆಯ ಉದ್ಘೋಷದೊಂದಿಗೆ ಕಾರ್ಗಿಲ್ ವಿಜಯೋತ್ಸವ ಜಾಥಾ ಅತ್ಯಂತ ವಿಜೃಂಭಣೆಯ ಸುಂದರವಾದ ನೋಟ
Published on

ವಿಜಯಪುರ: ಕರಡಿ ಮಜಲು, ಡೊಳ್ಳು ಕುಣಿತ, ಗೊಂಬೆ ಕುಣಿತ, ತ್ರಿವರ್ಣ ಧ್ವಜಗಳ ಹಾರಾಟ ಸೇರಿದಂತೆ ಹತ್ತು ಹಲವು ಕಲಾ ಪ್ರಕಾರಗಳು ಹಾಗೂ ಭಾರತ ಮಾತೆಯ ಉದ್ಘೋಷದೊಂದಿಗೆ ಕಾರ್ಗಿಲ್ ವಿಜಯೋತ್ಸವ ಜಾಥಾ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ಮಾಜಿ ಸೈನಿಕರ ಕಲ್ಯಾಣ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಾರ್ಗಿಲ್ ವಿಜಯೋತ್ಸವವನ್ನು ಸತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಗೋದಾವರಿ ಹೊಟೇಲ್ ಬಳಿಯ ಡಾ.ಬಾಬು ಜಗಜೀವನ್ ರಾಮ್ ವೃತ್ತದ ಬಳಿ ಜಾಥಾಗೆ ಅದ್ದೂರಿ ಚಾಲನೆ ನೀಡಲಾಯಿತು. ನೂರಾರು ದೇಶಭಕ್ತರು ಜಾಥಾದಲ್ಲಿ ಪಾಲ್ಗೊಂಡರು.

ತೆರೆದ ವಾಹನದಲ್ಲಿ ಭಾರತ ಮಾತೆ ಭವ್ಯ ನ ಭಾವಚಿತ್ರದ ಮೆರವಣಿಗೆ ಸಂಚಲನ ಮೂಡಿಸಿತು. ದೇಶ ಭಕ್ತಿ ಗೀತೆಗಳಿಗೆ ಯುವ ಜನತೆ ಹೆಜ್ಜೆಹಾಕಿದ್ದು ಮೈನವಿರೇಳಿಸುವಂತೆ ಮಾಡಿತು.

ಛತ್ರಪತಿ ಶಿವಾಜಿ ಮಹಾರಾಜ್ ವೃತ್ತ, ಮಹಾತ್ಮ ಗಾಂಧಿ, ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಂತ ಶ್ರೇಷ್ಠ ಕನಕದಾಸ ವೃತ್ತದ ಮಾರ್ಗವಾಗಿ ಕಂದಗಲ್ಲ ಹನುಮಂತರಾಯ ರಂಗಮಂದಿರ ತಲುಪಿ ಜಾಥಾ ಸಮಾಪ್ತಿಗೊಂಡಿತು.

ಮಾಜಿ ಸೈನಿಕರ ಶಿಸ್ತು ಬದ್ಧ ಹೆಜ್ಜೆ ಜಾಥಾದ ಅರ್ಥಪೂರ್ಣ ತೆ ಹೆಚ್ಚಿಸಿದರೆ ಸಮವಸ್ತ್ರ ಧರಿಸಿ ತ್ರಿವರ್ಣ ಧ್ವಜ ಹಿಡಿದ ವಿದ್ಯಾರ್ಥಿಗಳ ನಡಿಗೆ ದೇಶಭಕ್ತಿ ಹೆಚ್ಚಿಸಿತು. ಇಟ್ಟಂಗಿಹಾಳದ ಎಕ್ಸಲೆಂಟ್ ಆಂಗ್ಲಮಾಧ್ಯಮ ಪ್ರೌಢ ಶಾಲೆ, ಕಾಳಿದಾಸ ಪ್ರೌಢಶಾಲೆ, ಲಕ್ಷ್ಮಿ ಅಕ್ಕನಬಳಗ ನವರಸಪುರ, ತಾಲೂಕು ಮಾಜಿ ಸೈನಿಕರ ಸಂಘದ ಮಹಿಳಾ ಘಟಕ ಬಬಲೇಶ್ವರ, ದ್ರೋಣ ಅಕಾಡೆಮಿ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು, ಕಲಾವಿದರು ಮೆರವಣಿಗೆಯ ಮೆರಗು ಹೆಚ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net