ಮಹನೀಯರ ಜಯಂತಿ ಅದ್ದೂರಿ ಆಚರಣೆ

02 KRN-1
ಕೆ.ಆರ್.ನಗರದ ಆಡಳಿತ ಸೌಧದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಬು ಜಗಜೀವನರಾಮ್ ಮತ್ತು ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಶಾಸಕ.ಡಿ.ರವಿಶಂಕರ್ ಮಾತನಾಡಿದರು. ಜಿ.ಸುರೇಂದ್ರ ಮೂರ್ತಿ, ವಿ.ಪಿ.ಕುಲದೀಪ್, ಡಾ.ಡಿ.ನಟರಾಜು, ಬಿ.ವಿ.ವೆಂಟೇಶ್, ಎಸ್.ಶಿವಪ್ರಕಾಶ್ ಇದ್ದರು.
Published on

ಕೆ.ಆರ್.ನಗರ: ಪಟ್ಟಣದ ಪುರಸಭೆಯ ಬಯಲು ರಂಗ ಮಂದಿರದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಏ.25ರಂದು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಯಿತು.

ಪಟ್ಟಣದ ಆಡಳಿತಸೌಧದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶಾಸಕ ಡಿ.ರವಿಶಂಕರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಯಂತಿ ಆಚರಣಾ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತಲ್ಲದೆ ಇದಕ್ಕೂ ಮೊದಲು ಏ.5ರಂದು ಡಾ.ಬಾಬು ಜಗಜೀವನರಾಮ್ ಮತ್ತು ಏ.14ರಂದು ಅಂಬೇಡ್ಕರ್ ಅವರ ಜಯಂತಿಯನ್ನು ಸರ್ಕಾರದಿಂದ ಸಾಂಕೇತಿಕವಾಗಿ ಆಚರಿಸಲು ತೀರ್ಮಾನಿಸಲಾಯಿತು.

ಶಾಸಕ ಡಿ.ರವಿಶಂಕರ್ ಮಾತನಾಡಿ, ಏ.25ರಂದು ಸಾಲಿಗ್ರಾಮ ಮತ್ತು ಕೆ.ಆರ್.ನಗರ ಎರಡೂ ತಾಲೂಕುಗಳ ದಲಿತ ಮುಖಂಡರು ಮತ್ತು ಇತರ ಎಲ್ಲ ಸಮಾಜಗಳ ಹಿರಿಯರ ಸಲಹೆಯಂತೆ ಅದ್ದೂರಿಯಾಗಿ ಜಯಂತಿ ಆಚರಣೆ ಮಾಡಲಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಸೇರಿಸಲಿದ್ದು, ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ವಾಹನ ಮತ್ತು ಊಟದ ವ್ಯವಸ್ಥೆ ಮಾಡುತ್ತೇನೆ ಹೆಚ್ಚು ಜನ ಸೇರುವಂತೆ ಸಮಾಜದ ಮುಖಂಡರು ಗಮನಹರಿಸಬೇಕು. ಅಲ್ಲದೆ ಪ್ರತಿ ಗ್ರಾಮಕ್ಕೆ ತೆರಳಿ ವ್ಯಾಪಕ ಪ್ರಚಾರ ಮಾಡಬೇಕು ಎಂದು ತಿಳಿಸಿದರು.

ಇಬ್ಬರು ಮಹನೀಯರ ಜಯಂತಿ ಕಾರ್ಯಕ್ರಮಕ್ಕೂ ಎರಡೂ ಸಮುದಾಯದ ಶ್ರೀಗಳು, ಬೌದ್ಧ ಭಿಕ್ಕುಗಳು ಮತ್ತು ಆ ದಿನದಲ್ಲಿ ಲಭ್ಯವಿರುವ ಸಚಿವರನ್ನು ಆಹ್ವಾನಿಸಿ ಅರ್ಥಪೂರ್ಣವಾಗಿ ಆಚರಣೆ ಮಾಡುವ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಸಾಧಕರನ್ನು ಗೌರವಿಸಲಾಗುತ್ತದೆ ಎಂದು ತಿಳಿಸಿದರು.

ಜಯಂತಿ ಆಚರಣೆಯಂದು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕೃಷ್ಣರಾಜೇಂದ್ರ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಿಂದ ಬಾಬು ಜಗಜೀವನರಾಮ್ ಮತ್ತು ಅಂಬೇಡ್ಕರ್ ಅವರ ಬೃಹತ್ ಭಾವಚಿತ್ರಗಳನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಾವಿರಾರು ಜನರ ಸಮ್ಮುಖದಲ್ಲಿ ವೈಭವದಿಂದ ಅಂಬೇಡ್ಕರ್ ಪ್ರತಿಮೆ, ಕೃಷ್ಣರಾಜೇಂದ್ರ ವೃತ್ತ, ಪುರಸಭೆ ವೃತ್ತದ ಮೂಲಕ ವೇದಿಕೆ ಬಳಿಗೆ ತರಲಾಗುತ್ತದೆ ಎಂದು ಶಾಸಕರು ಸಭೆಗೆ ಮಾಹಿತಿ ನೀಡಿದರು.

ತಹಸೀಲ್ದಾರರಾದ ಜಿ.ಸುರೇಂದ್ರಮೂರ್ತಿ, ಎಸ್.ಎನ್.ನರಗುಂದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಲ್.ಶಂಕರಮೂರ್ತಿ, ದಲಿತ ಮುಖಂಡರಾದ ಡಿ.ಕೆ.ಕೊಪ್ಪಲುರಾಜಯ್ಯ, ಹನಸೋಗೆನಾಗರಾಜು, ಎಂ.ಲೋಕೇಶ್, ಗೀತಾಮಹೇಶ್, ಎಂ.ಎಸ್.ಮಹದೇವ್, ರಾಚಯ್ಯ, ಡಿ.ಕಾಂತರಾಜು, ಹನಸೋಗೆಸಿದ್ದಯ್ಯ, ಕಂಠಿಕುಮಾರ್, ಡಿ.ವಿ.ಗುಡಿನಂದೀಶ್, ರಾಜಯ್ಯ, ಎಚ್.ಎಸ್.ಸ್ವಾಮಿ ಮಾತನಾಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎ.ಎನ್.ರವಿಕುಮಾರ್, ವಿ.ಪಿ.ಕುಲದೀಪ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಆರಕ್ಷಕ ನಿರೀಕ್ಷಕ ಎಸ್.ಶಿವಪ್ರಕಾಶ್, ಮುಖಂಡರಾದ ನರಸಿಂಹರಾಜು, ಗುರುಸಿದ್ದಯ್ಯ, ಎಂ.ಎಚ್.ಸ್ವಾಮಿ, ನಂಜುಂಡ, ಕುಂಬಾರಕೊಪ್ಪಲು ನಂಜಯ್ಯ, ಹೊಸಕೋಟೆ ಚಲುವರಾಜು, ಉದಯಶಂಕರ್, ಸೈಯದ್‌ಜಾಬೀರ್, ಕಳ್ಳಿಮುದ್ದನಹಳ್ಳಿ ಚಂದ್ರು, ತಿಮ್ಮಶೆಟ್ಟಿ, ಗುರುಸ್ವಾಮಿ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net