

ಕಳಸ: ಕಳಸ ಸಾರ್ವಜನಿಕ ಶ್ರೀಸೌಹಾರ್ದ ಗಣೇಶೋತ್ಸವದ ಎರಡನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಳಸದ ಅರಮನೆಮಕ್ಕಿ ಮೈದಾನದಲ್ಲಿ ಆ.27ರಿಂದ ಸೆಪ್ಟೆಂಬರ್ 4 ರವರೆಗೆ ಅದ್ದೂರಿಯಾಗಿ ಗಣೇಶೋತ್ಸವ ನಡೆಯಲ್ಲಿದೆ ಎಂದು ಸಮಿತಿ ಅಧ್ಯಕ್ಷ ಬಿ.ವಿ.ರವಿ ರೈ ತಿಳಿಸಿದರು. 27ರಂದು ಗಣಪತಿ ಪ್ರತಿಷ್ಠಾಪನೆ ಹಾಗೂ ಅಂದು ಕಲರ್ಸ್ ಕನ್ನಡ ಖ್ಯಾತಿಯ ಕಲಾವತಿ ದಯಾನಂದ್ ಅವರಿಂದ ಕಲಾ ಸಂಗೀತ ಸಂಜೆ, 28 ರಂದು ಮಕ್ಕಿಮನೆ ಕಲಾ ವೃಂದದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, 29ಕ್ಕೆ ರಾಜ್ಯಮಟ್ಟದ ಸೌಹಾರ್ದ ನೃತ್ಯ ಸ್ಫರ್ಧೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
30 ರಂದು ಹೊಸಪೇಟೆಯ ನಾಟ್ಯ ಕುಟೀರ ತಂಡದಿಂದ ನೃತ್ಯ ರೂಪಕ ಮತ್ತು ವಿಶೇಷ ನಾಟ್ಯ ಪ್ರದರ್ಶನ, 31ಕ್ಕೆ ಬೆಳಗ್ಗೆ ಸತ್ಯನಾರಾಯಣ ಪೂಜೆ, ಸಂಜೆ ಆಸರೆ ಫೌಂಡೇಷನ್‌ನಿಂದ ಕಳಸದ ಹಿಂದು ರುದ್ರಭೂಮಿಗೆ ವಿದ್ಯುತ್ ಚಾಲಿತ ಶವ ಸಂಸ್ಕಾರ ಯಂತ್ರ ಹಸ್ತಾಂತರ, ರಾತ್ರಿ ಮ್ಯೂಸಿಕಲ್ ನೈಟ್, ಸೆ.1ರಂದು ಬೆಳಗ್ಗೆ ಆಟೋಟ ಸ್ಪರ್ಧೆ ನಡೆಯಲಿದೆ. ಸೆ.2ರಂದು ಬೆಳಗ್ಗೆ ಚತುರ್ದ್ರವ್ಯ ಹೋಮ, ಸಂಜೆ ಪುದರ್ ದೀತಿಜಿ ನಾಟಕ, ಸೆ.3ರಂದು ಸಂಜೆ ಧಾರ್ಮಿಕ ಸಭೆ, ರಾತ್ರಿ ಮಣಿಕಂಠನ ಮಹಿಮೆ ನಾಟಕ, ಸೆ.4 ರಂದು ಬೆಳಗ್ಗೆ ಹೆಸರಾಂತ ಕಲಾವಿದರಿಂದ ಸಂಗೀತ ರಸಮಂಜರಿ, ರಾತ್ರಿ ವಿವಿಧ ವೇಷ, ಭೂಷಣ, ಟ್ಯಾಬ್ಲೋಗಳ ಸ್ಪರ್ಧೆ, ರಸ್ತೆಯುದ್ದಕ್ಕೂ ದೀಪಾಲಂಕಾರ, ಆಕರ್ಷಕ ಸಿಡಿ ಮದ್ದುಗಳ ಮೂಲಕ ಅದ್ಧೂರಿ ಮೆರವಣಿಗೆಯೊಂದಿಗೆ ಸ್ವಾಮಿಯ ಜಲಸ್ಥಂಭನ ನಡೆಯಲಿದೆ.
ಸಮಿತಿ ಗೌರವಾಧ್ಯಕ್ಷ ರುದ್ರಯಾಚಾರ್, ಮಂಜಪ್ಪ ಪೂಜಾರಿ, ಸುಜಯ ಸದಾನಂದ, ಗೌರವ ಕಾರ್ಯದರ್ಶಿ ಬ್ರಹ್ಮದೇವ, ಖಜಾಂಚಿ ಪದ್ಮಕುಮಾರ್ ಇದ್ದರು.