ಬಾಲೆಹೊಸೂರಲ್ಲಿ ಅದ್ದೂರಿ ಕಡುಬಿನ ಕಾಳಗ

lxr kadubina kalaga
Published on

ಲಕ್ಷೆ್ಮೕಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಸಂಜೆ ಸಂಪ್ರದಾಯದಂತೆ ಕಡುಬಿನ ಕಾಳಗ ಸಾವಿರಾರು ಭಕ್ತರ ಜಯಘೊಷಗಳ ನಡುವೆ ಶ್ರದ್ಧಾ ಭಕ್ತಿ ಮತ್ತು ಅದ್ದೂರಿಯಾಗಿ ನೆರವೇರಿತು.

ಶ್ರೀ ಮಠದ ಪಟ್ಟಾಧ್ಯಕ್ಷ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿಗಳು ಕುದುರೆ ಮೇಲೆ ಕುಳಿತು ರಥ ಪ್ರದಕ್ಷಿಣೆ ಹಾಕುತ್ತಾ ಕಡುಬಿನ ಕಾಳಗದ ಸಂಪ್ರದಾಯ ನೆರವೇರಿಸಿದರು.

ಶ್ರೀಮಠದ ಪ್ರಾಂಗಣ, ರಥ ಬೀದಿಯುದ್ದಕ್ಕೂ ಕುದುರೆ ಮೇಲೆ ಕುಳಿತು ಸಂಚರಿಸಿದ ಶ್ರೀಗಳು, ಕಡುಬಿನ ಚೂರುಗಳು, ಬೆಂಡು, ಬೆತ್ತಾಸ, ಬಿಸ್ಕಟ್, ಬೆಲ್ಲ, ಹಣ್ಣು, ಕಲ್ಲು ಸಕ್ಕರೆ, ಉತ್ತತ್ತಿಗಳನ್ನು ಭಕ್ತರತ್ತ ಉತ್ಸಾಹದಿಂದ ಎಸೆದರು.

ಬಾಲೆಹೊಸೂರ ಹಾಗೂ ಸುತ್ತಲಿನ ಗ್ರಾಮಗಳ ಅಪಾರ ಭಕ್ತ ಸಮೂಹ ಪ್ರಸಾದದ ಭಾವನೆಯಿಂದ ಆಯ್ದು ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಸ್ವೀಕರಿಸುವುದು ಕಂಡುಬಂದಿತು. ಶ್ರೀ ಮಠದ ಜಾತ್ರಾ ಸಮಿತಿಯವರು, ಗ್ರಾಮದ ಮುಖಂಡರು, ಯುವಕರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net