ಶ್ರೀ ಸಿದ್ಧಾರೂಢ ಸ್ವಾಮಿಗಳ ಅದ್ದೂರಿ ಜನ್ಮೋತ್ಸವ

h17-siddarudha
Published on

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳ 188 ನೇ ಜನ್ಮೋತ್ಸವವನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಗ್ಗೆ 5.30 ಘಂಟೆಗೆ ಉಭಯಶ್ರೀಗಳ ಗದ್ದುಗೆಗಳಿಗೆ ಅಭಿಷೇಕ, ಮಧ್ಯಾಹ್ನ 12 ಘಂಟೆಗೆ ಸುಮಂಗಲೆಯರಿಗೆ ಉಡಿತುಂಬುವುದು, ಶ್ರೀಗಳ ಉತ್ಸವ ಮೂರ್ತಿಯ ಪಲ್ಲಕ್ಕಿಯು ವಾದ್ಯಮೇಳಗಳೊಂದಿಗೆ ಹೊರಟು ನಗರದಲ್ಲಿ ಸಂಚರಿಸಿ ಬಂದ ನಂತರ ಸಂಜೆ 5.30ರ ಸುಮಾರಿಗೆ ಕುಂಭಹೊತ್ತ ಮಹಿಳೆಯರು ಶ್ರೀೀಮಠಕ್ಕೆ ಬರಮಾಡಿಕೊಂಡರು.
5.45ಕ್ಕೆ ಶ್ರೀಮಠದ ಕೈಲಾಸ ಮಂಟಪದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಕೆ.ಜಿ. ಶಾಂತಿ ಇವರು ಚಾಲನೆ ನೀಡಿದರು.
ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಟ್ರಸ್ಟ್ ಕಮಿಟಿ ವತಿಯಿಂದ ನಿರ್ಮಿಸಿದ ಜಗದ್ಗುರು ಶ್ರೀ ಸಿದ್ಧಾರೂಢರ ಅತಿಥಿಗೃಹ, ಉಭಯ ಶ್ರೀಗಳ ಮಂದಿರ ಮುಂದಿರುವ ಆವರಣದ ನೆಲಕ್ಕೆ ಗ್ರಾನೈಟ್ ಕಲ್ಲುಗಳ ಜೋಡಣೆ ಮತ್ತು ಯಾತ್ರಿ ನಿವಾಸ ಕೊಠಡಿಗಳ ನವೀಕರಣ ಕಾಮಗಾರಿಯನ್ನು ಉದ್ಘಾಟಿಸಿಸಿದರು. ಶ್ರೀಮಠದ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ ಅಧ್ಯಕ್ಷತೆ ವಹಿಸಿದ್ದರು.
ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷ ಡಿ.ಆರ್. ಪಾಟೀಲ, ಟ್ರಸ್ಟ್ ಕಮಿಟಿ ವೈಸ್ ಚೇರ್ಮನ್ ಉದಯಕುಮಾರ ನಾಯ್ಕ, ಧರ್ಮದರ್ಶಿಗಳಾದ ಕೆ.ಎಲ್. ಪಾಟೀಲ, ಶಾಮಾನಂದ ಪೂಜೇರಿ, ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರ, ಚನ್ನವೀರ ಮುಂಗುರವಾಡಿ, ಅಂದಾನಪ್ಪ ಚಾಕಲಬ್ಬಿ, ವಸಂತ ಸಾಲಗಟ್ಟಿ, ಸಿದ್ದನಗೌಡ ಪಾಟೀಲ, ವಿನಾಯಕ ಘೋಡ್ಕೆ, ಗೀತಾ ಕಲಬುರ್ಗಿ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net