ಇಂಡಿ: ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಬಸವ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು.
ಮುಖಂಡರಾದ ಅಶೋಕ ಬಳಬಟ್ಟಿ, ಮಾಧವರಾವ ಪವಾರ, ಅಣ್ಣಪ್ಪ ಅಹಿರಸಂ, ಮಾತನಾಡಿ, 12ನೇ ಶತಮಾನದಲ್ಲಿ ನಮಗೆ ಸಂವಿಧಾನ ಕೊಟ್ಟ ಮಹಾನ್ ಮಾನವತಾವಾದಿ ಅಣ್ಣ ಬಸವಣ್ಣನವರು ಎಂದರು.
ಯುವಕರು ದುಶ್ಚಟಕ್ಕೆ ಬಲಿಯಾಗಿ ಶರೀರ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಣ್ಣ ಬಸವಣ್ಣನವರು ಹಾಗೂ ಶಿವಾಜಿಯ ಚರಿತ್ರೆಯನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಉಮೇಶ ಬಳಬಟ್ಟಿ, ಬಸವರಾಜ ಜಾದವ, ಚಿಮ್ಮಾಜಿ ಥೋರಾತ, ಉಮೇಶ ಬೆನಕನಹಳ್ಳಿ, ರೇವಣಸಿದ್ದ ಕುಂಬಾರ, ಉಮೇಶ ಚೌಹಾಣ, ಮಹಾಂತೇಶ ಹಿರೇಮಠ, ಸರ್ವೇಶ ಹಂಡಗೆ, ಮಹಾಂತೇಶ ಸೀತಿಮನಿ, ದಯಾನಂದ ಬನಸೋಡೆ, ಸತೀಶ ಸೀತಿಮನಿ, ಹಣಮಂತ ಸೋಲಂಕಾರ, ಗುರು ಕುಂಬಾರ, ಪ್ರಭಾಕರ ಜಾದವ, ಸಚೀನ ಕುಂಬಾರ, ಸಿದ್ದಾರಾಮ ಕುಂಬಾರ ಉಪಸ್ಥಿತರಿದ್ದರು.