ವಿಜೃಂಭಣೆಯ ಅಯ್ಯಪ್ಪ ಸ್ವಾಮಿ ದೀಪೋತ್ಸವ

5kls1
Published on

ಕಳಸ: ಕಳಸ ಅಯ್ಯಪ್ಪ ಸ್ವಾಮಿ ಭಕ್ತವೃಂದದ ವತಿಯಿಂದ 46ನೇ ವರ್ಷದ ಶ್ರೀಅಯ್ಯಪ್ಪ ಸ್ವಾಮಿ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಕಳಸದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ದೇವರಿಗೆ ಅಭಿಷೇಕ, ಗಣಹೋಮ ಹಾಗೂ ವಿಶೇಷ ಪೂಜೆ ಮಂಗಳಾರತಿ ಅನ್ನ ಸಂತರ್ಪಣೆ ನಡೆಯಿತು. ದೀಪೋತ್ಸವ ನಿಮಿತ್ತ ದೇವಾಲಯನ್ನು ತಳಿರು ತೋರಣ ಹೂಗಳಿಂದ ಆಕರ್ಷಕವಾಗಿ ಸಿಂಗಾರ ಮಾಡಲಾಗಿತ್ತು.

ಸಂಜೆ ಶ್ರೀಅಯ್ಯಪ್ಪ ಸ್ವಾಮಿ ಪಾಲುಕೊಂಬು ಮೆರವಣಿಗೆಯು ನೂರಾರು ಅಯ್ಯಪ್ಪ ವೃತಧಾರಿಗಳ ಭಕ್ತಿ ಶರಣು ಘೋಷಗಳೊಂದಿಗೆ ನಡೆಯಿತು. ಕಲಶೇಶ್ವರ ದೇವಸ್ಥಾನದಲ್ಲಿ ಪಾಲುಕೊಂಬು ಎತ್ತಿ ಆರಂಭಗೊಂಡ ಮೆರವಣಿಗೆ ರಾಜಬೀದಿಯಲ್ಲಿ ಸಾಗಿ ಮಹಾವೀರ ರಸ್ತೆಯಲ್ಲಿ ಹಿಂತಿರುಗಿ ನಂತರ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವ ನಡೆಯಿತು. ಮೆರವಣಿಗೆಯುದ್ದಕ್ಕೂ ಕೇರಳದ ಪ್ರಸಿದ್ಧ ಚೆಂಡೆ ಮೇಳವು ಮೆರವಣಿಗೆಗೆ ಮೆರುಗು ನೀಡಿತು. ನೂರಾರು ಪುಟಾಣಿಗಳು ದೀಪ ಹಿಡಿದು ಮೆರವಣಿಗೆ ಯುದ್ದಕ್ಕೂ ಸಾಗಿದರು.

ಕಳಸ, ಬಾಳೆಹೊಳೆ, ಮರಸಣಿಗೆ, ಹೊರನಾಡು, ಹಿರೇಬೈಲು, ಬಾಳೆಹೊಳೆ ಮುಂತಾದ ಗ್ರಾಮಗಳಿಂದ ನೂರಾರು ಅಯ್ಯಪ್ಪ ವೃತಧಾರಿಗಳು ಮತ್ತು ಅಯ್ಯಪ್ಪ ಭಕ್ತಾಧಿಗಳು ಆಗಮಿಸಿ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net