

ಸವಣೂರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣದ ಎಪಿಎಂಸಿ ಮುಖ್ಯದ್ವಾರದಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರತಿನಿತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಸಿದ್ದರಿಂದ ರಾಜ್ಯದಲ್ಲಿ ಬಡವರ್ಗದವರು ಜೀವನ ನಡೆಸುವುದು ಕಷ್ಟವಾಗಿದೆ. ಕಾಂಗ್ರೆಸ್ ಪಕ್ಷ ಜನರ ಹಿತದೃಷ್ಟಿ ಮರೆತು ಹಾಗೂ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡದೆ ಅವೈಜ್ಞಾನಿಕವಾಗಿ ಆಡಳಿತ ನಡೆಸುತ್ತಿದೆ. ಬೆಲೆ ಏರಿಕೆ ಹಿಂಪಡೆಯದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ ಗಾಣಗೇರ, ವೀರಣ್ಣ ಅಂಗಡಿ, ಮಂಡಳ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಪದಾಧಿಕಾರಿಗಳಾದ ಅಶೋಕ ಎಲಿಗಾರ, ಶ್ರೀನಿವಾಸ ಗಿತ್ತೆ, ಗಂಗಾಧರ ಬಾಣದ, ಗಾಳೆಪ್ಪ ದೊಡ್ಡಪೂಜಾರ, ಮಹಾಂತೇಶ ಹಾವಣಗಿ, ಸದಾನಂದ ಕೆಮ್ಮಣಕೇರಿ, ಧರಿಯಪ್ಪಗೌಡ ಪಾಟೀಲ, ಶ್ರೀಕಾಂತ ಲಕ್ಷ್ಮೇಶ್ವರ, ಚನ್ನಬಸಯ್ಯ ದುರ್ಗದಮಠ, ಮಹೇಶ ಮುದಗಲ್, ನಾಗರಾಜ ವಾಲ್ಮೀಕಿ, ಮಹಾದೇವ ಮಹೇಂದ್ರಕರ, ಪ್ರವೀಣ ಬಾಲೇಹೊಸೂರ, ಸಂಗಮೇಶ ಎರೇಶಿಮಿ, ಇಕ್ಬಾಲ್ ವಕೀಲ, ಇತರರಿದ್ದರು.