ಬಡವರಿಗೆ ಸರ್ಕಾರಿ ಆಸ್ಪತ್ರೆಯೇ ದೇಗುಲ

BIRUR doct
ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಜೆಸಿಐನಿಂದ ವೈದ್ಯರಾದ ಕಿಶೋರ್, ಅರುಣ್ ಅವರನ್ನು ಸನ್ಮಾನಿಸಿದರು. ಅಯೂಬ್ ಅಹಮದ್, ಗವಿರಂಗಪ್ಪ, ಮಾರ್ಗದ ಮಧು, ಸವಿತಾ ಇತರರಿದ್ದರು.
Published on

ಬೀರೂರು: ಗ್ರಾಮೀಣ ಪ್ರದೇಶಗಳ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳೇ ದೇವಾಲಯಗಳು ಎಂದು ಜೆಸಿಐ ಅಧ್ಯಕ್ಷ ಅಯೂಬ್ ಅಹಮದ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ವೈದ್ಯರ ದಿನಾಚರಣೆ ಅಂಗವಾಗಿ ತಜ್ಞವೈದ್ಯ ಕಿಶೋರ್ ಮತ್ತು ಮಕ್ಕಳ ತಜ್ಞ ಅರುಣ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪಟ್ಟಣದ ಜನರು ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಬೇಡಿಕೆ ಇಟ್ಟು ಹೋರಾಟ ಮಾಡಿದರೂ ಫಲಪ್ರದವಾಗಿಲ್ಲ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದರೆ ಸಾಕಷ್ಟು ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ ಎಂದರು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಕೆಂಚೇಗೌಡ ಮಾತನಾಡಿ, ವೈದ್ಯ ವೃತ್ತಿ ಜನರ ಜೀವನ ರಕ್ಷಿಸುವ ಮಹತ್ವದ ಸೇವಾವೃತ್ತಿ. ಜನರು ನಮ್ಮನ್ನು ಗುರುತಿಸಿ ಗೌರವಿಸುವುದು ಹೆಮ್ಮೆ ಎನಿಸುತ್ತದೆ ಎಂದರು.
ಆಯುಷ್ ವೈದ್ಯ ಗವಿರಂಗಪ್ಪ, ಬಿ.ಎಂ.ನಾಗರಾಜ್, ಜೇಸಿಯ ಮಾರ್ಗದ ಮಧು, ಸವಿತಾ ರಮೇಶ್, ಬೆಳ್ಳುಳ್ಳಿ ಶೇಖರ, ಸಂದೀಪ, ಲಕ್ಷ್ಮಣ್ ಗೌಡ, ಮಲ್ಲಿಕಾರ್ಜುನ, ಹರ್ಷ, ವಿನೋದ, ರಾಖೇಶ, ಪ್ರಮೋದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net