

ರೋಣ: ಯುವಪೀಳಿಗೆ ಕೃಷಿಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡು, ಹೊಸ ಕೃಷಿ ಪದ್ಧತಿ ಅಳವಡಿಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಹೆಸರು ಖರೀದಿ ಕೇಂದ್ರ ಹಾಗೂ ಹಿಂಗಾರ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಎಲ್ಲ ಸೌಲಭ್ಯಗಳನ್ನು ಸರ್ಕಾರ ಈಗಾಗಲೇ ನೀಡಲಾಗಿದೆ. ಮುಂಗಾರಿನಲ್ಲಿ ಉತ್ತಮ ಬೆಳೆ ಪಡೆದಿದ್ದು, ಹಿಂಗಾರು ಬೆಳೆಯೂ ಉತ್ತಮವಾಗುವ ನಿರೀಕ್ಷೆ ಇದೆ. ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಲಾಗುತ್ತಿದೆ ಎಂದರು.
ಕೃಷಿ ಉಪನಿರ್ದೇಶಕ ಪಾಲಾಕ್ಷಗೌಡ ಮಾತನಾಡಿ, ಹಿಂಗಾರು ಮಳೆಯು ಉತ್ತಮವಾಗುವ ಸಂಭವ ಇದೆ. ರೈತರು ಬೀಜೋಪಚಾರಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಬಸವರಾಜ ನವಲಗುಂದ, ಪರಶುರಾಮ ಅಳಗವಾಡಿ, ವಿ.ಆರ್. ಗುಡಿಸಾಗರ, ವೆಂಕಣ್ಣ ಬಂಗಾರಿ, ಶಿವಣ್ಣ ಅರಹುಣಸಿ, ಪಾಲಾಕ್ಷಗೌಡ್ರ, ಪ್ರಭು ಮೇಟಿ, ಗಿರೀಶಗೌಡ ಪಾಟೀಲ, ಮೇಘರಾಜ ಬಾವಿ, ಬಸವರಾಜ ಸುಂಕದ, ಸಂಗನಬಸಪ್ಪ ಪರಡ್ಡಿ, ಕಾಶೀಂಸಾಬ್ ಪಿಂಜಾರ್, ಅಶೋಕ ಗಡಗಿ, ಪಿ.ಟಿ. ರಬ್ಬನಗೌಡ್ರ, ಶಂಕರ ಕಳಿಗಣ್ಣವರ, ನಿಂಬಣ್ಣ ನವಲಗುಂದ, ಯೂಸೂಫ್ ಇಟಗಿ, ರವೀಂದ್ರಗೌಡ ಪಾಟೀಲ, ಪ್ರಮೋದ ಕುಲಕರ್ಣಿ, ಶಿವಪುತ್ರಪ್ಪ ದೊಡ್ಡಮನಿ, ಇತರರಿದ್ದರು.