ಪ್ರತಿಭೆ ಅನಾವರಕ್ಕೆ ಉತ್ತಮ ವೇದಿಕೆ

AML KARANJI 1
Published on

ಐಮಂಗಲ: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಆಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇ.ತಿಪ್ಪೇರುದ್ರಪ್ಪ ಹೇಳಿದರು.

ಕಲ್ಲಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು, ಪಾಲಕರು ಪ್ರೋತ್ಸಾಹಿಸಬೇಕು. ಸೋಲು-ಗೆಲುವು ಒಂದೇ ನಾಣ್ಯದ ಮುಖವಾಗಿದ್ದು, ಪಾಲ್ಗೊಳ್ಳುವಿಕೆ ಮುಖ್ಯ ಎಂಬುದನ್ನು ಮನದಟ್ಟು ಮಾಡಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ಮೂರ್ಕಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗದೆ ಆಟ, ಪ್ರತಿಭಾ ಕಾರಂಜಿಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಗ್ರಾಪಂ ಸದಸ್ಯ ನಾಗರಾಜು, ಕಣುಮೇಶ್, ಮಾಜಿ ಸದಸ್ಯ ಕಲ್ಲಹಟ್ಟಿ ಆರ್.ಹರೀಶ್, ಸಿಆರ್‌ಪಿ ಚಕ್ರಪಾಣಿ, ಮುಖ್ಯಶಿಕ್ಷಕ ಆರ್.ಜಯಪ್ರಕಾಶ್, ಶಿಕ್ಷಕರಾದ ಸಿ.ಮಲ್ಲಿಕಾರ್ಜುನ್, ಎಸ್.ರಂಗಮ್ಮ, ಬಿ.ಮಲ್ಲಮ್ಮ, ಟಿ.ನರಸಮ್ಮ, ಪ್ರಮಿಳಾ, ಮಹಾಲಿಂಗಪ್ಪ, ಟಿ.ಎನ್.ರಾಧಮ್ಮ, ನಿವೃತ್ತ ಶಿಕ್ಷಕಿ ಇಂದ್ರಮ್ಮ, ಇಸಿಒ ಹರೀಶ್, ರಂಗಸ್ವಾಮಿ, ಶಿವಾನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net