

ಕೊಳ್ಳೇಗಾಲ: ಭಗೀರಥ ಚಲನಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಆಶೀರ್ವದಿಸಬೇಕು ಎಂದು ಚಿತ್ರನಟ ಎಸ್.ಜಯಪ್ರಕಾಶ್ ಕೋರಿದರು.
ಪ್ರೀತಿ, ಪ್ರೇಮ, ಹೋರಾಟ, ಲಂಚ, ವಂಚನೆ, ದ್ರೋಹ ಇನ್ನಿತರ ವಿಚಾರಗಳ ಬಗ್ಗೆ ಜಾಗೃತಿ ಸಂದೇಶವನ್ನು ನೀಡುವ ಭಗೀರಥ ಚಲನಚಿತ್ರ ಎಲ್ಲರನ್ನೂ ಗೆಲ್ಲಲಿದೆ. ಈಗಾಗಲೇ ಫೆ.7ರಂದು ಚಲನಚಿತ್ರ ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆದ್ದರಿಂದ ಸಿನಿಮಾವನ್ನು ಯಾರಾರು ವೀಕ್ಷಣೆ ಮಾಡಿಲ್ಲ ಅವರು ನೋಡಬೇಕೆಂದು ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿದರು.
ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಭಗೀರಥ ಸಿನಿಮಾ ಕುಟುಂಬ ಸಮೇತ ನೋಡುವ ಒಂದು ಸದಭಿರುಚಿ ಸಿನಿಮಾವಾಗಿದೆ. ಸಿನಿಪ್ರಿಯರು ತಪ್ಪದೆ ನೋಡಬೇಕು. ಕನ್ನಡದ ಸಿನಿಮಾಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಕಾವೇರಿ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ತೇಜಸ್, ಲೋಕೇಶ್‌ಗೌಡ, ಸಹ ನಿರ್ಮಾಪಕಿ ಪ್ರೀತಿ ಸಿಂಗ್, ಚಿತ್ರನಟಿ ನಾಗರತ್ನ, ಸಿ.ಎಚ್.ಕೃಷ್ಣಯ್ಯ, ಜಯ ಕರ್ನಾಟಕ ಪ್ರಭು, ಕೆ.ಕೆ.ಮೂರ್ತಿ, ವರದರಾಜು, ನಗರಸಭೆ ಮಾಜಿ ಸದಸ್ಯ ಚಂದ್ರು ಇದ್ದರು.