

ಕುಂದಾಪುರ: ಸ್ವ ಉದ್ಯಮಿ, ಸ್ವಂತ ವ್ಯಾಪಾರ ವಹಿವಾಟು ಮಾಡುವರು. ಸ್ವ ಪ್ರಯತ್ನದಿಂದ ಉತ್ತಮ ಗುರಿಯೊಂದಿಗೆ ಆರಂಭಿಸಬೇಕು. ಇತರರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಮುನ್ನಡೆದರೆ ಉದ್ಯಮ ಸಫಲವಾಗುತ್ತದೆ ಎಂದು ಉದ್ಯಮಿ ಅಲ್ವಿನ್ ಕ್ವಾಡ್ರರ್ಸ್ ಹೇಳಿದರು.
ಕುಂದಾಪುರ ರೋಜರಿ ಚರ್ಚಿನ ಕಥೊಲಿಕ್ ಸಬಾ ಘಟಕ, ಜನಸಾಮಾನ್ಯ ಆಯೋಗದ ವತಿಯಿಂದ ಚರ್ಚ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಕುಂದಾಪುರ ರೋಜರಿ ಚರ್ಚ್ ವ್ಯಾಪ್ತಿಯಲ್ಲಿನ ಉದ್ಯಮಿಗಳ ಮಹೋತ್ಸವದಲ್ಲಿ ಮಾತನಾಡಿದರು.
ಚರ್ಚ್ ಧರ್ಮಗುರು ಪಾವ್ಲ್ ರೇಗೊ ಮಾತನಾಡಿ, ದೇವರ ಮೇಲೆ ವಿಶ್ವಾಸವಿಟ್ಟು, ದೇವರ ಆಧಾರವನ್ನು ಕೋರಿಕೊಳ್ಳಬೇಕು. ನಿರಂತರ ದೈವಿಕ ಜೀವನದೊಂದಿಗೆ ಸಾಗಬೇಕು. ಪರಿಶ್ರಮದ ಜತೆಗೆ ಪ್ರಾಮಾಣಿಕ ನಿಲುವಿನೊಂದಿಗೆ ನಡೆದರೆ ತಮ್ಮ ಉದ್ಯಮದಲ್ಲಿ ಉತ್ತಮ ಫಲ ಸಿಗುತ್ತದೆ ಎಂದರು.
35 ಉದ್ಯಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಥೋಲಿಕ್ ಸಭಾ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು. ಡಾ.ಸೋನಿ ಡಿಕೋಸ್ಟಾ ಕಾರ್ಯಕ್ರಮ ನಿರೂಪಿಸಿದರು.