ಒಳ್ಳೆಯ ಸ್ನೇಹಿತ ಗ್ರಂಥಾಲಯಕ್ಕೆ ಸಮ

8Athani1
Published on

ಅಥಣಿ: ಸೋಲೆಂಬ ರೋಗಕ್ಕೆ ಪರಿಶ್ರಮವೇ ಮದ್ದು. ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು ಎಂದು ತಹಸೀಲ್ದಾರ್ ಸಿದರಾಯ ಭೋಸಗಿ ಹೇಳಿದರು.

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಉತ್ತಮ ಸ್ನೇಹಿತ ಗ್ರಂಥಾಲಯಕ್ಕೆ ಸಮ ಎಂದರು.

ಮುಖ್ಯ ಅತಿಥಿ ಸುರೇಶ ಗೆಜ್ಜಿ ಮಾತನಾಡಿ, ವಿದ್ಯಾರ್ಥಿಗಳು ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಡಾ.ಆರ್.ಎನ್.ಇನಾಮದಾರ ವಾರ್ಷಿಕ ವರದಿ ಓದಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಶಿಕಲಾ ಹಂಜಿ, ಶಿವಾನಂದ ಕೋಳಿ, ಭಾಗ್ಯಶ್ರೀ ನಡುವಿನಮನಿ, ಜ್ಯೋತಿ ಪವಾರ, ಲಕ್ಷ್ಮೀ ಬಡಿಗೇರ, ಸೃಷ್ಟಿ ಶೇಡಬಾಳ, ಭಾಗ್ಯಶ್ರೀ ಐನಾಪೂರ, ಸಂಕೇತ ಹಿರೇಮಠ, ಲಕ್ಷ್ಮೀ ಬಡಿಗೇರ, ಶಿವಾನಂದ ಮೋಟಗಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಶಂಭುಲಿಂಗ ಮಮದಾಪುರ, ಪ್ರಕಾಶ ಪಾಟೀಲ, ವಿಜಯ ಬುರ್ಲಿ, ಉಪನ್ಯಾಸಕರಾದ ಎಸ್.ಎಂ.ಜನಗೌಡ, ಬಿ.ಆರ್. ರಾಥೋಡ, ಶ್ರೀನಿವಾಸ, ಜಿ.ಎಚ್.ಕುಲಕರ್ಣಿ, ರೇಷ್ಮಾ ಇನಾಮದಾರ, ಪ್ರಕಾಶ ಪಾಟೀಲ, ವಿಜಯ ಬುರ್ಲಿ, ಬಿ.ಎಸ್.ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net