

ಹುಬ್ಬಳ್ಳಿ: ತಮ್ಮ ಕನಸಿನ ಮನೆ ನನಸಾಗಿಸಿಕೊಳ್ಳುವುದು ಪ್ರತಿಯೊಬ್ಬರ ಜೀವನದ ಬಹುದೊಡ್ಡ ಆಸೆ. ಇದಕ್ಕಾಗಿ ಅನೇಕರು ದುಡ್ಡು ಕೂಡಿಡುವುದು, ವಸತಿ ಯೋಜನೆಗಳಲ್ಲಿ ಹಣ ತೊಡಗಿಸುವುದು ಇತ್ಯಾದಿಗಳನ್ನು ಮಾಡುತ್ತಾರೆ. ಆದರೆ, ಇದೆಲ್ಲಕ್ಕೂ ಸರಿಯಾದ ಮಾರ್ಗದರ್ಶನ ನೀಡುವ ಬಹು ನಿರೀಕ್ಷಿತ ವಿಜಯವಾಣಿ ಪ್ರಾಪರ್ಟಿ ಎಕ್ಸ್‌ಪೋ ಇದೀಗ ನಿಮ್ಮ ಮುಂದೆ ಬಂದಿದೆ.
ಇಲ್ಲಿಯ ರಾಯ್ಕರ ಮೈದಾನದಲ್ಲಿ ಮೇ 3ರಿಂದ ಮೂರು ದಿನಗಳ ಆಯೋಜಿಸಿರುವ ರಿಯಲ್ ಎಸ್ಟೇಟ್ ಹಾಗೂ ಇಂಟಿರಿಯರ್ಸ್ ಎಕ್ಸ್‌ಪೋಕ್ಕೆ ಒಂದೊಮ್ಮೆ ಭೇಟಿ ನೀಡಿದರೆ ನಿಮ್ಮ ಕನಸಿನ ಮನೆ ನನಸು ಮಾಡಿಕೊಳ್ಳುವ ಸುಲಭ ಮಾರ್ಗಗಳು ಸಿಗುತ್ತವೆ.
ಅವಳಿನಗರ ಮಾತ್ರವಲ್ಲ, ರಾಜ್ಯದ ವಿವಿಧ ಕಡೆಗಳಿಂದ ಬಿಲ್ಡರ್, ಡೆವಲಪರ್‌ಗಳು ಇಲ್ಲಿ ತಮ್ಮ ವಸತಿ ಯೋಜನೆಗಳನ್ನು ಪ್ರದರ್ಶನ ಮಾಡುತ್ತಿರುವುದರಿಂದ ಒಂದೇ ವೇದಿಕೆಯಲ್ಲಿ ಹತ್ತಾರು ಯೋಜನೆಗಳ ಮಾಹಿತಿ ಪಡೆಯಬಹುದು. ನಿಮಗಿಷ್ಟವಾದ, ಬಜೆಟ್‌ಗೆ ಹೊಂದುವ ಮನೆ, ನಿವೇಶನ, ಅಪಾರ್ಟಮೆಂಟ್‌ನಲ್ಲಿ ಮನೆ, ವಿಲ್ಲಾ ಹೀಗೆ ತರಹೇವಾರಿ ಆಸ್ತಿ ಖರೀದಿ ಮಾಡಬಹುದಾಗಿದೆ.
ಅಕ್ಷಯ ತೃತೀಯ ಪ್ರಶಸ್ತ: ಅಕ್ಷಯ ತೃತೀಯ ಎಂದರೆ ಎಲ್ಲ ಜನರಿಗೂ ಆಸ್ತಿ ಖರೀದಿಗೆ ಪ್ರಶಸ್ತ ಎಂಬುದು ವಾಡಿಕೆ. ಇದಕ್ಕಾಗಿಯೇ ಮುಂಬರುವ ಅಕ್ಷಯ ತೃತೀಯ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ ಪ್ರಾಪರ್ಟಿ ಎಕ್ಸ್‌ಪೋ ಬಹಳ ಮಹತ್ವ ಪಡೆದುಕೊಂಡಿದೆ. ಬಿಲ್ಡರ್ ಹಾಗೂ ಡೆವಲಪರ್‌ಗಳು ಸಹ ಹಲವು ಕೊಡುಗೆಗಳನ್ನು ಗ್ರಾಹಕರಿಗೆ ನೀಡಲು ಸಜ್ಜಾಗಿದ್ದಾರೆ. ಅಕ್ಷಯ ತೃತೀಯ ದಿನ ಆಸ್ತಿ ಖರೀದಿ ಮಾಡಿದರೆ ಹೆಚ್ಚು ಲಾಭದಾಯಕ ಎಂಬ ನಂಬಿಕೆ ಜನರಲ್ಲಿ ಇದೆ. ಇದೇ ಕಾರಣಕ್ಕೆ ಮನೆ, ನಿವೇಶನ, ಅಪಾರ್ಟಮೆಂಟ್, ವಿಲ್ಲಾ, ಾರ್ಮಲ್ಯಾಂಡ್ ಹೀಗೆ ತರಹೇವಾರಿ ಆಸ್ತಿ ಕೊಳ್ಳಲು ಜನ ಮುಂದೆ ಬರುತ್ತಾರೆ.
ಮೂರು ದಿನಗಳವರೆಗೆ ಪ್ರಾಪರ್ಟಿ ಎಕ್ಸ್‌ಪೋ ನಡೆಯುತ್ತಿದೆ. ಮನೆ, ನಿವೇಶನ ಖರೀದಿಗೆ ಬಹಳಷ್ಟು ಗ್ರಾಹಕರಿಗೆ ಪ್ರಶ್ನೆ ಮೂಡುವುದು ಸಹಜ. ಆದರೆ, ಇಲ್ಲಿಗೆ ಬಂದರೆ ಅತ್ಯುತ್ತಮ ಬೆಲೆ, ಅಚ್ಚುಕಟ್ಟಾದ ಕನಸಿನ ಮನೆ, ನಿವೇಶನ ಪಡೆಯಲು ಅನುಕೂಲವಾಗಲಿದೆ.I ಚೇತನ ಪವಾರ, ಸ್ಕೈ ಟೌನ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ನಿರ್ಮಿಸುವ ಕಟ್ಟಡವು ನಿಯಮದ ಪ್ರಕಾರ ಹಾಗೂ ಕಾನೂನು ಬದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸಿ ಮನೆಗಳನ್ನು ಖರೀದಿಸಬೇಕು. ಇದರಿಂದ ಮುಂದಾಗುವ ತೊಂದರೆ ತಪ್ಪಿಸಿಕೊಳ್ಳಬಹುದು. ಬಿಲ್ಡರ್‌ಗಳ ವಸತಿ ಯೋಜನೆಗಳನ್ನು ಪ್ರದರ್ಶನ ಮಾಡಲು ಪ್ರಾಪರ್ಟಿ ಎಕ್ಸ್‌ಪೋ ಸಹಾಯ ಮಾಡುತ್ತದೆ. ಗ್ರಾಹಕರು ಹಾಗೂ ಬಿಲ್ಡರ್‌ಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. I ಪ್ರಕಾಶ ಸುಬ್ರಾಯ, ಪೂರ್ವಿ ಹೌಸಿಂಗ್ ಡೆವಲಪ್‌ಮೆಂಟ್ ಕಂಪನಿ ಪ್ರೈ.ಲಿ. ಧಾರವಾಡದಲ್ಲಿ ಐಐಟಿ, ಫೋರೆನ್ಸಿಕ್ ವಿವಿ ಸೇರಿ ಹಲವು ಸೌಕರ್ಯಗಳು ಬಂದಿರುವುದರಿಂದ ಅಭಿವೃದ್ಧಿಗೆ ವೇಗ ಸಿಕ್ಕಿದೆ. ರಿಯಲ್ ಎಸ್ಟೇಟ್‌ಗೂ ಅನುಕೂಲವಾಗಿದೆ. ಜನರು ಕಾನೂನು ಬದ್ಧವಾಗಿ ಯಾವುದೇ ಸಮಸ್ಯೆಯಾಗದಂತೆ ನಿವೇಶನ, ಮನೆ ಖರೀದಿಸಬೇಕಾದರೆ ಅಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿರಬೇಕು, ದಾಖಲೆಗಳು ಸರಿಯಾಗಿರಬೇಕು. ಇವೆಲ್ಲವನ್ನೂ ಪರಿಶೀಲಿಸಿ ಆಸ್ತಿ ಖರೀದಿ ಮಾಡಬೇಕು. ಪ್ರಾಪರ್ಟಿ ಎಕ್ಸ್‌ಪೋದಿಂದ ಉತ್ತಮವಾದುದನ್ನು ಆಯ್ಕೆ ಮಾಡಲು ಗ್ರಾಹಕರಿಗೆ ಅನುಕೂಲವಾಗಿದೆ. I ಪೂರ್ಣಿಮಾ ನಾಯ್ಡು, ಶ್ರೀ ರಿಯಾಲ್ಟಿ ರಿಯಲ್ ಎಸ್ಟೇಟ್ ಬಿಜಿನೆಸ್ ಬೂಮ್‌ನಲ್ಲಿದೆ. ಚಿನ್ನವು ಹಳದಿ ಬಂಗಾರವಾದರೆ, ಜಮೀನನ್ನು ಕಪ್ಪು ಬಂಗಾರ ಎಂದು ಕರೆಯುತ್ತಾರೆ. ಇದರಲ್ಲಿ ಹೂಡಿಕೆ ಮಾಡುವುದಕ್ಕೆ ಹೆಚ್ಚಿನ ಜನರು ಬಯಸುತ್ತಾರೆ. ಭೂಮಿ ಮಹತ್ವದ ಹೂಡಿಕೆ ಕ್ಷೇತ್ರವಾಗಿದೆ. ಹುಬ್ಬಳ್ಳಿ ಧಾರವಾಡ ಮತ್ತು ಅಕ್ಕಪಕ್ಕದ ಜಿಲ್ಲೆ, ಗ್ರಾಮೀಣ ಜನರಿಗೆ ಎಲ್ಲಿ ನಿವೇಶನ, ಮನೆ ಸಿಗುತ್ತವೆ ಎಂಬ ಸಮಗ್ರ ಮಾಹಿತಿ ಒದಗಿಸುವ ಪ್ರಾಪರ್ಟಿ ಎಕ್ಸ್‌ಪೋದಿಂದ ಬಹುದೊಡ್ಡ ಅನುಕೂಲವಾಗಿದೆ. ಗ್ರಾಹಕರು- ನಿರ್ಮಾಪಕರನ್ನು ಒಂದೇ ಕಡೆ ಸೇರಿಸುತ್ತದೆ. ಹೆಚ್ಚಿನ ಜನರಿಗೆ ತಲುಪಲು ಇದು ಉತ್ತಮ ವೇದಿಕೆ. I ವಿಕಾಸ ಸೊಪ್ಪಿನ, ನೀಲಾ ಬಿಲ್ಡರ್ಸ್ ಆೃಂಡ್ ಪ್ರಮೋಟರ್ಸ್ ಸೈಟ್, ಮನೆಯಂತ ಆಸ್ತಿ ಕೊಳ್ಳಲು ಜನರು ಮುಂದೆ ಬರುತ್ತಿದ್ದಾರೆ. ಅದರಲ್ಲೂ ಅಕ್ಷಯ ತೃತೀಯ ದಿನ ಖರೀದಿಗೆ ಹೆಚ್ಚಿನ ಜನರು ಆಸಕ್ತಿ ತೋರುತ್ತಾರೆ. ಹಾಗಾಗಿ ಪ್ರಾಪರ್ಟಿ ಎಕ್ಸ್‌ಪೋ ಅಂಥವರಿಗೆ ವೇದಿಕೆಯಾಗಲಿದೆ. ಗ್ರಾಹಕರಿಗೆಲ್ಲ ಉತ್ತಮ ್ಲಾಟ್‌ಾರ್ಮ್ ಸಿಕ್ಕಂತಾಗುತ್ತದೆ. ಒಂದೇ ಕಡೆ ಎಲ್ಲದರ ಮಾಹಿತಿ ಸಿಗಲಿದೆ. I ಗುರುಪ್ರಕಾಶ ಕೋಚಲಾಪುರ, ಸಿಟಿ ಡೆವಲಪರ್ಸ್ ಆೃಂಡ್ ಬಿಲ್ಡರ್ಸ್ ಅವಳಿನಗರದಲ್ಲಿ ರಿಯಲ್ ಎಸ್ಟೇಟ್ ಬಿಜಿನೆಸ್ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಇಲ್ಲಿ ಉತ್ತಮ ಭವಿಷ್ಯ ಇರುವುದರಿಂದ ಹೊರಗಡೆಯಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ವಿಶೇಷವಾಗಿ ಸುರಕ್ಷತೆ, ಅನುಕೂಲತೆಗಳ ದೃಷ್ಟಿಯಿಂದ ಅಪಾರ್ಟಮೆಂಟ್‌ಗಳನ್ನು ಜನರು ಇಷ್ಟಪಡುತ್ತಿದ್ದಾರೆ. ಹಾಗಾಗಿ ಅಪಾರ್ಟಮೆಂಟ್‌ಗಳ ನಿರ್ಮಾಣವೂ ಜಾಸ್ತಿ ಆಗಿದೆ. I ಅಭಿಷೇಕ ಶಿವಯೋಗಿಮಠ, ಎಸ್ ಆೃಂಡ್ ಎಸ್ ಬಿಲ್ಡರ್ಸ್ ಆೃಂಡ್ ಡೆವಲಪರ್ಸ್ ಅವಳಿನಗರದಲ್ಲಿ ಅಪಾರ್ಟಮೆಂಟ್ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ. ಹೆಚ್ಚು ಅನುಕೂಲಕರವಾಗಿರುವುದರಿಂದ ಇಲ್ಲಿ ಮನೆ ಕೊಳ್ಳಲು ಆಸಕ್ತಿ ತೊರುತ್ತಿದ್ದಾರೆ. ನಿವೇಶನಗಳ ಬೆಲೆ ಜಾಸ್ತಿ ಇರುವುದು ಕೂಡ ಇದಕ್ಕೆ ಕಾರಣ ಇರಬಹುದು. ಹಾಗಾಗಿ ರೆಡಿ ಇರುವ ಅಪಾರ್ಟಮೆಂಟ್ ಮನೆಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಯೋಗ್ಯ ಬೆಲೆಯಲ್ಲಿ ಮನೆಗಳು ಗ್ರಾಹಕರಿಗೆ ಸಿಗುತ್ತಿವೆ. ಸದ್ಯ ರಿಯಲ್ ಎಸ್ಟೇಟ್ ಬಿಜಿನೆಸ್ ಉತ್ತಮವಾಗಿ ನಡೆಯುತ್ತಿದ್ದು, ಪ್ರಾಪರ್ಟಿ ಎಕ್ಸ್‌ಪೋದಿಂದ ಇನ್ನಷ್ಟು ಅನುಕೂಲವಾಗಿದೆ. I ಎಸ್.ಪಿ. ದೇವಸೂರ, ನಿಖಿಲ್ ಡೆವಲಪರ್ಸ್. ಸ್ಪರ್ಧಾತ್ಮಕ ಬೆಲೆಯಲ್ಲಿ ಅಪಾರ್ಟಮೆಂಟ್‌ನಲ್ಲಿ ಮನೆ, ಲೇಔಟ್‌ನಲ್ಲಿ ನಿವೇಶನಗಳನ್ನು ಕೊಳ್ಳಲು ಪ್ರಾಪರ್ಟಿ ಎಕ್ಸ್‌ಪೋ ಉತ್ತಮ ವೇದಿಕೆಯಾಗಿದೆ. ಎಲ್ಲರನ್ನೂ ಒಂದೇ ಸೂರಿನಡಿ ಸೇರಿಸಿ ರಿಯಲ್ ಎಸ್ಟೇಟ್ ಬಿಜಿನೆಸ್‌ಗೆ ಹೆಚ್ಚು ಅನುಕೂಲ ಮಾಡಿಕೊಟ್ಟಂತಾಗಿದೆ. ಇದರ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಮಕ್ಕಳ ಶಿಕ್ಷಣ, ಉದ್ಯೋಗ ಇತ್ಯಾದಿಗಾಗಿ ನಗರಕ್ಕೆ ಬರುವ ಅನೇಕ ಜನರಿಗೆ ಬಾಡಿಗೆ ಮನೆ ಬದಲು ಅಪಾರ್ಟಮೆಂಟ್‌ಗಳಿಗೆ ಪ್ರಾಶಸ್ತ್ಯ ಕೊಡುತ್ತಿರುವುದರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. I ಮೃತ್ಯುಂಜಯ ಮರೋಳ, ಯಶಸ್ವಿ ಡೆವಲಪರ್ಸ್. ವಿಜಯವಾಣಿ ಪ್ರಾಪರ್ಟಿ ಎಕ್ಸ್‌ಪೋ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಹಳ ಅನುಕೂಲಕರ ವಾತಾವರಣ ನಿರ್ಮಿಸಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಒಂದೇ ವೇದಿಕೆಗೆ ಬರುವುದರಿಂದ ವಸತಿ ಯೋಜನೆಗಳನ್ನು ಪ್ರದರ್ಶಿಸಿ ಗ್ರಾಹಕರಿಗೆ ಹೆಚ್ಚು ಆಯ್ಕೆಗಳನ್ನು ನೀಡಬಹುದಾಗಿದೆ. ಇದರಿಂದ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರು ಮನೆ, ನಿವೇಶನ ಖರೀದಿಸಬಹುದು. I ಯೋಗೇಶ ಹಬೀಬ, ವರ್ಡ್ಸ್ ಸ್ಕ್ವೇರ್ ಗ್ರುಪ್ ನಿಜವಾಗಿಯೂ ಆಸ್ತಿ ಖರೀದಿಸಬೇಕೆನ್ನುವವರಿಗೆ ಪ್ರಾಪರ್ಟಿ ಎಕ್ಸ್‌ಪೋ ಬಹಳಷ್ಟು ಅನುಕೂಲ ಆಗಲಿದೆ. ಗ್ರಾಹಕರು ಹಾಗೂ ಬಿಲ್ಡರ್‌ಗಳು ಮುಖಾಮುಖಿ ಪರಿಚಯ ಆಗುವುದರಿಂದ ವಿಶ್ವಾಸವೂ ಬೆಳೆಯುತ್ತದೆ. ಯಾವುದೇ ತೊಂದರೆ ಇಲ್ಲದೇ ಜನರು ಮನೆ, ನಿವೇಶನ ಕೊಳ್ಳಬಹುದು. I ವಿನಯ ಕೋಟಿ, ಹಬೀಬ ಆೃಂಡ್ ಕೋಟಿ ಡೆವಲಪರ್ಸ್