ಮೈಸೂರಿನ ಮನೆಯೊಂದರಲ್ಲಿ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

crime
Published on

ಮೈಸೂರು: ರಮಾಬಾಯಿನಗರದ ಬಸವೇಶ್ವರ ಬಡಾವಣೆಯಲ್ಲಿ ಮನೆಯ ಡೋರ್‌ಲಾಕ್ ಮುರಿದ ಕಳ್ಳರು 8 ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

ಬಡಾವಣೆ ನಿವಾಸಿ, ಶಿಕ್ಷಕ ಆರ್.ಪಿ.ಪ್ರಕಾಶ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಪ್ರಕಾಶ್ ಜೂ. 16 ರಂದು ಕುಟಂಬದವರೊಂದಿಗೆ ಊರಿಗೆ ತೆರಳಿದ್ದರು. ಜೂ.17 ರಂದು ಹಿಂತಿರುಗಿ ಬಂದ ಸಂದರ್ಭ ಮನೆ ಕಳವು ನಡೆದಿರುವುದು ಕಂಡು ಬಂತು. ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net