ಥೂ, ಇದೆಂಥಾ ನೀಚ ಕೃತ್ಯ? ಮಧುಗಿರಿಯಲ್ಲಿ ದೇವರ ವಿಗ್ರಹಕ್ಕೆ ಚಪ್ಪಲಿ ಕಾಲಿಂದ ಒದ್ದು ವಿಡಿಯೋ ಮಾಡಿದ

accused
Published on

ಮಧುಗಿರಿ: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೋಟೆ ಕಲ್ಲಪ್ಪನ ಪಾಳ್ಯದಲ್ಲಿ ಯುವಕನೊಬ್ಬ ದೇವರ ವಿಗ್ರಹದ ಮೇಲೆ ಚಪ್ಪಲಿ ಕಾಲಿಟ್ಟು ವಿಕೃತಿ ಮೆರೆದಿದ್ದಾನೆ. ಆ ಹೀನ ಕೃತ್ಯದ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.

ಡಿ.ವಿ.ಹಳ್ಳಿ ಸಮೀಪದ ಬೆಟ್ಟದ ಮೇಲಿನ ಶ್ರೀಕೋಟೆಕಲ್ಲಪ್ಪ ದೇವಸ್ಥಾನದ ಮೂಲ ವಿಗ್ರಹಕ್ಕೆ ದಬ್ಬೇಘಟ್ಟದ ಶ್ರೀಕಾಂತ(23) ಎಂಬುವವನು ಮಂಗಳವಾರ ಬೆಳಗ್ಗೆ ಚಪ್ಪಲಿ ಕಾಲಿನಿಂದ ಒದ್ದು ವಿಕೃತವಾಗಿ ವರ್ತಿಸಿದ್ದಾನೆ. ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಕ್ಷ್ಯುಬ್ಧ ವಾತಾವರಣ ನಿಮಾರ್ಣವಾಗಿದೆ.

ಭಕ್ತರ ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಯುವಕರ ತಂಡ ಆರೋಪಿಯನ್ನು ಬೆನ್ನತ್ತಿದರಾದರೂ, ಆತ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಪ್ರಕರಣ ಕುರಿತು ತುಂಗೋಟಿ ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಗ್ರಾಮಸ್ಥರು ಸಭೆ ನಡೆಸಿದರು. ಶ್ರೀಕೊಟೆ ಕಲ್ಲಪ್ಪ ದೇವರಿಗೆ ಭಿನ್ನವಾಗಿರುವುದರಿಂದ ಸದ್ಯ ಪೂಜೆ ಮಾಡುವುದು ಬೇಡ. ಆರೋಪಿ ಸಿಕ್ಕ ನಂತರ ಮುಂದಿನ ತೀರ್ಮಾನ ಮಾಡೋಣ ಎಂದು ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net