

ಹೊಳೆನರಸೀಪುರ : ಬೃಂದಾವನ ಒಡೆಯ ಶ್ರೀ ರಾಘವೇಂದ್ರ ಗುರುರಾಯರ 353 ನೇ ಆರಾಧನಾ ಮಹೋತ್ಸವ ವೈಭವದಿಂದ ಸಂಪನ್ನವಾಯಿತು. ಬ್ರಾಹ್ಮಿ ಮುಹೂರ್ತದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿತು. ರಾಯರ ಸನ್ನಿಧಿ ವಿಶೇಷ ಅಲಂಕಾರದಿಂದ ಶೃಂಗಾರಗೊಂಡಿತು. ವಿಶೇಷ ಪೂಜೆ, ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ, ಸುಪ್ರಭಾತ ಸೇವೆ,ಭಜನೆ,ಉತ್ಸವ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿತು.