ಇಟ್ಟಿಗೆ ತೊಟ್ಟಿಯಲ್ಲಿ ಬಿದ್ದು ಬಾಲಕಿ ಸಾವು

Child death
Published on

ಮುಂಡಗೋಡ: ಇಟ್ಟಿಗೆ ತಯಾರಿಸಲು ಸಂಗ್ರಹಿಸಿಟ್ಟಿದ್ದ ನೀರಿನ ತೊಟ್ಟಿಯಲ್ಲಿ ಮಗುವೊಂದು ಆಟವಾಡುತ್ತ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನ ಇಂದೂರ‌ ಗ್ರಾಮದ ಮಾನ್ವಿತ ಮಲ್ಲಿಕಾರ್ಜುನ ಹೊಸೂರ(3) ಮೃತ ಪಟ್ಟ ಬಾಲಕಿ ಯಾಗಿದ್ದಾಳೆ. ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ಇಟ್ಟಿಗೆ ತಯಾರಿಸುವ ಕೆಲಸಕ್ಕೆ ಹೋಗುವಾಗ ತಾಯಿ ತನ್ನ ಮೂರು ವರ್ಷದ ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು ತಾಯಿ ಇಟ್ಟಿಗೆ ತಯಾರಿಸುವ ಕೆಲಸದಲ್ಲಿರುವಾಗ ಆಟವಾಡುತ್ತಿದ್ದ ಮಗುವು ನೀರು ಸಂಗ್ರಹಿಸಿಟ್ಟ ತೊಟ್ಟಿಯಲ್ಲಿ ಬಿದ್ದಿದೆ ಮಗುವನ್ನು ತಕ್ಷಣವೇ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಗೆ ಕರೆದುಕೊಂಡು ಹೋಗುವ ಮಾಗ೯ ಮಧ್ಯ ಮಗುವು ಸಾವನ್ನಪ್ಪಿದೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net