ಆಟವಾಡುತ್ತಲೇ ಅಪ್ಪನ ವಾಹನಕ್ಕೆ ಬಲಿಯಾದ ಕಂದಮ್ಮ! ವಾಹನ ರಿವರ್ಸ್​ ತೆಗೆದುಕೊಳ್ಳುವಾಗ ದುರಂತ

New Project
Published on

ಆನೇಕಲ್: ಸರ್ಜಾಪುರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಮನಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಹೃದಯವಿದ್ರಾಕ ದುರಂತವೊಂದು ಸಂಭವಿಸಿದೆ. ಆಟವಾಡುತ್ತಾ ಕುಳಿತಿದ್ದ ಒಂದೂವರೆ ವರ್ಷದ ಕಂದಮ್ಮ, ಆಕಸ್ಮಿಕವಾಗಿ ತಂದೆ ಚಾಲನೆ ಮಾಡುತ್ತಿದ್ದ ವಾಹನಕ್ಕೇ ಬಲಿಯಾಗಿದ್ದು, ತಂದೆಯ ಗೋಳಾಟ ನೋಡಲಾಗುತ್ತಿಲ್ಲ.

ಬಾಲಕೃಷ್ಣ ಎಂಬುವರ ಮಗಳು ಮನಿಶಾ ದೇವಿ ಮೃತ ದುರ್ದೈವಿ. ಬಾಲಕೃಷ್ಣ ಇಚರ್ ವಾಹನ ಚಾಲಕರಾಗಿದ್ದರು. ಮನೆ ಬಳಿ ವಾಹನ ರಿವರ್ಸ್ ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಮನಿಶಾ ವಾಹನಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದಳು. ಕೂಡಲೇ ಮಗುವನ್ನ ಆಸ್ಪತ್ರೆಗೆ ರವಾನಿಸಲಾಗಿತ್ತು.

ಚಿಕಿತ್ಸೆ ಫಲಿಸದೆ ಮನಿಶಾ ಆಶ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ. ಸರ್ಜಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗಳ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದ ತಂದೆ-ತಾಯಿ, ಮಗಳ ಸಾವಿಂದ ಕಂಗೆಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net