ಗುಣವಂತೆ ಸಮೀಪ ಮಗುಚಿದ ಅನಿಲ ರಹಿತ ಟ್ಯಾಂಕರ್

25hnr1- TANKAR
Published on

ಹೊನ್ನಾವರ: ತಾಲೂಕಿನ ಗುಣವಂತೆಯ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ಗುರುವಾರ ನಡೆದಿದೆ.
ಅನಿಲ ರಹಿತ ಟ್ಯಾಂಕರ್ ಇದಾಗಿದ್ದು, ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜೋರಾದ ಗಾಳಿ-ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಹೆದ್ದಾರಿ ಪಕ್ಕದ ತೋಟಕ್ಕೆ ಹೋಗಿ ಬಿದ್ದಿದೆ. ವಾಹನ ಬಿದ್ದ ಸ್ಥಳವು ಅಪಾಯಕಾರಿ ತಿರುವು ಆಗಿದೆ. ಆಗಾಗ ಇಲ್ಲಿ ವಾಹನ ಚಾಲಕರ ನಿಯಂತ್ರಣ ತಪ್ಪುತ್ತದೆ ಎಂದು ಸ್ಥಳಿಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net