ಬೆಂಗಳೂರಲ್ಲಿ ಭೀಕರ ಅಪಘಾತ: ಕಸದ ಲಾರಿ ಡಿಕ್ಕಿ, ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ದುರ್ಮರಣ

New Project(7)
Published on

ಬೆಂಗಳೂರು: ಹೆಬ್ಬಾಳ ಪೊಲೀಸ್ ಠಾಣೆ ಸಮೀಪ ಕೆಳಸೇತುವೆ ಬಳಿ ಕಾರು- ಲಾರಿ-ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ರಸ್ತೆ ದಾಟುತ್ತಿದ್ದ ಶಾಲಾ ಬಾಲಕಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

12 ವರ್ಷದ ಬಾಲಕಿ ಅಕ್ಷಯ ಬಿ. ನರಸಿಂಹಮೂರ್ತಿ ಮೃತ ದುರ್ದೈವಿ. ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಇಂದು ಶಾಲೆ ಮುಗಿದ ಬಳಿಕ ಮನೆಗೆ ಹೋಗುವಾಗ ಬಿಬಿಎಂಪಿ ಕಸದ ಲಾರಿ ಆಕೆ ಮೇಲೆ ಹರಿದಿದೆ. ರಸ್ತೆ ದಾಟಲು ನಿಂತಿದ್ದವರಿಗೂ ಲಾರಿ ಡಿಕ್ಕಿಯಾಗಿದೆ.

ಅಂಡರ್ ಪಾಸ್​ನಲ್ಲಿ ನೀರು ನಿಂತಿರುವ ಕಾರಣ ಅಂಡರ್ ಪಾಸ್ ಬಳಸದೆ ಬಾಲಕಿ ಮತ್ತು ಜನರು ರಸ್ತೆ ದಾಟುತ್ತಿದ್ದರು. ಈ ವೇಳೆ ಸರಣಿ ಅಪಘಾತ ಸಂಭವಿಸಿದೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net