ಸಾರಿಗೆ ಸಂಸ್ಥೆ ಉಳಿವಿಗಾಗಿ ಗಾಂಧಿವಾದಿಯ ಪಾದಯಾತ್ರೆ

09 ron 2
Published on

ರೋಣ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಳಿವಿಗಾಗಿ ಮತ್ತು ಸಿಬ್ಬಂದಿಯ ಹಿತರಕ್ಷಣೆಗಾಗಿ ತಾಲೂಕಿನ ಕರ್ಕಿ ಕಟ್ಟಿ ಗ್ರಾಮದ ಗಾಂಧಿವಾದಿ ಮುತ್ತಣ್ಣ ತಿರ್ಲಾಪುರವರು ರೋಣ ಬಸ್ ನಿಲ್ದಾಣದಿಂದ ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣಕ್ಕೆ ಶುಕ್ರವಾರ ಪಾದಯಾತ್ರೆ ಆರಂಭಿಸಿದರು.
ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಗುಲಗಂಜಿ ಮಠದ ಗುರುಪಾದ ಮಹಾಸ್ವಾಮೀಜಿ, ಕೆಎಸ್‌ಆರ್‌ಟಿಸಿಯನ್ನು ಉಳಿಸಿ ಬೆಳೆಸುವುದು ಕೇವಲ ಸರ್ಕಾರದ ಕೆಲಸವಲ್ಲ. ಅದು ಎಲ್ಲ ನಾಗರಿಕರ ಹೊಣೆಯಾಗಿದೆ. ಈ ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಚಾಲಕ ಮತ್ತು ನಿರ್ವಾಹಕರ ಜತೆ ಸಹಕಾರದಿಂದ ವರ್ತಿಸಬೇಕು ಎಂದರು.
ಅಬ್ದುಲ್‌ಸಾಬ್ ಹೊಸಮನಿ ಮಾತನಾಡಿ, ಅರ್ಥ ವ್ಯವಸ್ಥೆಗೆ ಸಾರಿಗೆ ಸಂಸ್ಥೆಗಳ ಕೊಡುಗೆ ಮಹತ್ವದ್ದಾಗಿದೆ. ಪ್ರತಿಭಟನೆ ವೇಳೆ ಬಸ್‌ಗಳಿಗೆ ಬೆಂಕಿ ಇಡುವುದು, ಹಾನಿ ಮಾಡುವುದನ್ನು ಮಾಡಬಾರದು ಎಂದರು. ವೆಂಕಣ್ಣ ಬಂಗಾರಿ, ರಾಜ್ಯ ರೈತ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಲೀಲಾ ಚಿತ್ರಗಾರ, ನಿವೃತ್ತ ಇಂಜಿನಿಯರ್ ಜಗದೀಶ ಮಡಿವಾಳರ, ನಿವೃತ್ತ ಎಪಿಎಂಸಿ ಕಾರ್ಯದರ್ಶಿ ಮಹದೇವಪ್ಪ ಹೊಸಮನಿ, ಅಬ್ದುಲ್ ಸಾಬ್ ಹೊಸಮನಿ ಅಭಿಮಾನಿ ಬಳಗದ ಅಧ್ಯಕ್ಷ ಶಂಕರ ದಂಡಿನ, ರೈತ ಸಂಘದ ಕಾರ್ಯದರ್ಶಿ ದೊಡ್ಡಬಸಪ್ಪ ನವಲಗುಂದ, ಸಿದ್ದಪ್ಪ ಗದಗಿನ, ಮುತ್ತಣ್ಣ ಕಟಗೇರಿ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net