ಕುಕ್ಕೆಯಲ್ಲಿ ಗ್ಯಾಲರಿ ಮಾದರಿ ಮಂದಿರ! :ಆಶ್ಲೇಷ ಬಲಿ ಪೂಜೆಗೆ ಸುವ್ಯವಸ್ಥಿತ ಭವನ : 1000 ಭಕ್ತರಿಗೆ ಆಸನ ವ್ಯವಸ್ಥೆ

New Project (42)
Published on

ರತ್ನಾಕರ ಸುಬ್ರಹ್ಮಣ್ಯ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ಒಂದಾದ ಆಶ್ಲೇಷ ಬಲಿ ಸೇವೆ ನೆರವೇರಿಸಲು ಭಕ್ತರಿಗೆ ಅನುಕೂಲವಾಗುವಂತೆ ಗ್ಯಾಲರಿ ಮಾದರಿಯಲ್ಲಿ ಬೃಹತ್ ಆಶ್ಲೇಷ ಬಲಿ ಪೂಜಾ ಮಂದಿರ ಕುಕ್ಕೆಯಲ್ಲಿ ನಿ ರ್ಮಾಣವಾಗಲಿದೆ.

ಮಂದಿರವನ್ನು ಮಾಜಿ ಸಚಿವ ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಹಾಗೂ ಬೆಂಗಳೂರಿನ ಉದ್ಯಮಿ ಜೈಪುನೀತ್ ನಿರ್ಮಿಸಿಕೊಡಲಿದ್ದಾರೆ. ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಮಂದಿರ ನಿ ರ್ಮಾಣ ಕಾರ್ಯ ಆರಂಭಕ್ಕೆ ಮುತುವರ್ಜಿ ವಹಿಸಿದ್ದಾರೆ.

ಪ್ರಮುಖ ಸೇವೆ: ವಿವಾಹ, ಸಂತಾನ, ಭೂಮಿ ಮತ್ತು ನೀರು ಇವುಗಳ ಸಮಸ್ಯಾ ಪರಿಹಾರಾರ್ಥ ಅಸಂಖ್ಯಾತ ಭಕ್ತರು ಶ್ರೀ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿ ಒಳಿತನ್ನು ಕಂಡುಕೊಂಡಿದ್ದಾರೆ. ಆದ್ದರಿಂದ ದೇಗುಲದಲ್ಲಿ ದಿನದಿಂದ ದಿನಕ್ಕೆ ಈ ಸೇವೆ ನೆರವೇರಿಸುವ ಭಕ್ತರ ಸಂಖ್ಯೆ ಅಗಣಿತವಾಗುತ್ತಿದೆ. ಸುಬ್ರಹ್ಮಣ್ಯನ ಜನ್ಮನಕ್ಷತ್ರ ಆಶ್ಲೇಷದ ದಿನ ಈ ಸೇವೆ ನೆರವೇರಿಸುವ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿದೆ. ಈ ಸೇವೆಯನ್ನು ಬೆಳಗ್ಗೆ ಮೂರು ಅವಧಿಯಲ್ಲಿ ಮತ್ತು ಸಂಜೆ ಒಂದು ಅವಧಿಯಲ್ಲಿ ನೆರವೇರಿಸುವ ವ್ಯವಸ್ಥೆ ಇದೆ. ಹಾಗಿದ್ದರೂ ಈಗ ಸೇವೆ ನೆರವೇರುವ ಸ್ಥಳದಲ್ಲಿ ಭಕ್ತರಿಗೆ ಸ್ಥಳಾವಕಾಶ ಕೊರತೆ ಉಂಟಾಗುವ ಕಾರಣ ವಿಶಾಲವಾದ ಆಶ್ಲೇಷ ಬಲಿ ಪೂಜಾ ಮಂದಿರ ನಿರ್ಮಾಣದಿಂದ ಭಕ್ತರಿಗೆ ಹೆಚ್ಚು ಅನುಕೂಲವಾಗಲಿದೆ.

ತುಳಸಿತೋಟದಲ್ಲಿ ಸೌಕರ್ಯ

ದೇಗುಲದ ತುಳಸಿತೋಟದಲ್ಲಿ ನೂತನ ಪೂಜಾ ಮಂದಿರ ನಿ ರ್ಮಾಣಗೊಳ್ಳಲಿದೆ. ಇದರಲ್ಲಿ ಒಂದು ಅವಧಿಗೆ ಏಕಕಾಲದಲ್ಲಿ 1000 ಭಕ್ತರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರ ಒಳಭಾಗದ ವಿಶಾಲವಾದ ಸ್ಥಳದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರುತ್ತದೆ. ಇದರ ಸುತ್ತಲೂ ವೃತ್ತಾಕಾರದಲ್ಲಿ ಮೆಟ್ಟಿಲು ರೀತಿಯಲ್ಲಿ ಆಸನಗಳನ್ನು ನಿರ್ಮಿಸಲಾಗುತ್ತದೆ. ಕೆಳಗಿನಿಂದ ಮೇಲಿನ ತನಕ ಹಂತ ಹಂತವಾಗಿ ಗ್ಯಾಲರಿ ರೀತಿಯಲ್ಲಿ ಭಕ್ತರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇರಲಿದೆ. ಇದರಿಂದಾಗಿ ಭಕ್ತರು ಸಾವಕಾಶವಾಗಿ ಆಶ್ಲೇಷ ಬಲಿ ಸೇವೆಯ ಪೂಜೆ, ಹೋಮ ಇತ್ಯಾದಿಗಳನ್ನು ನೋಡಲು ಸಾಧ್ಯವಾಗುತ್ತದೆ.

ವಿಶ್ರಾಂತಿ ಕೊಠಡಿ

ಇದೇ ಕಟ್ಟಡದಲ್ಲಿ ಪೂಜಾ ಪರಿಕರಗಳ ದಾಸ್ತಾನು ಕೊಠಡಿ ಮತ್ತು ಮುಂದಿನ ಬ್ಯಾಚ್‌ಗೆ ಕಾಯುವ ಭಕ್ತರಿಗೆ ವಿಶ್ರಾಂತಿ ಪಡೆಯಲು ಸುಸಜ್ಜಿತ ವ್ಯವಸ್ಥೆಯುಳ್ಳ ಕೊಠಡಿ ನಿರ್ಮಿತವಾಗಲಿದೆ. ಪ್ರವೇಶದ್ವಾರವನ್ನು ಆಕರ್ಷಕವಾಗಿ ನಿರ್ಮಿಸಲಾಗುತ್ತದೆ. ಹೊರಭಾಗದಲ್ಲಿ ಸೇವಾ ಕೌಂಟರ್, ಪ್ರಸಾದ ಕೌಂಟರ್, ವಾಹನ ನಿಲ್ದಾಣ, ಶೌಚಗೃಹ, ಪೂಜಾ ಸಾಮಗ್ರಿಗಳ ಅಂಗಡಿ ನಿ ರ್ಮಾಣವಾಗಲಿದೆ.

ಸೇವಾರೂಪದಲ್ಲಿ ನಿರ್ಮಿತವಾಗುವ ವಿಶಾಲವಾದ ಆಶ್ಲೇಷ ಬಲಿ ಪೂಜಾ ಮಂದಿರ ಭಕ್ತರಿಗೆ ಹೆಚ್ಚು ಅನುಕೂಲಕರವಾಗಿದೆ. ಶ್ರೀ ಪೂಜಾ ಮಂದಿರ ನಿ ರ್ಮಾಣಕ್ಕೆ ಬೇಕಾದ ಶ್ರಮ ವಹಿಸಲಾಗಿದೆ. ನೂತನ ಮಂದಿರದ ನೀಲಿನಕ್ಷೆಗೆ ಚೀಫ್ ಆರ್ಕಿಟೆಕ್ಟ್ ಮತ್ತು ವಾಸ್ತುಶಿಲ್ಪಿಗಳು ಒಪ್ಪಿಗೆ ನೀಡಿದ್ದಾರೆ. ಮುಜರಾಯಿ ಸಚಿವರು ಮಂದಿರ ನಿ ರ್ಮಾಣಕ್ಕೆ ದಾನಿಗಳಿಗೆ ಆದೇಶಪತ್ರ ನೀಡಿದ್ದಾರೆ. ಶ್ರೀ ದೇವರ ಕೃಪೆಯಿಂದ ವರ್ಷದ ಒಳಗೆ ನೂತನ ಮಂದಿರ ನಿ ರ್ಮಾಣಗೊಳ್ಳಲಿದೆ. ಹರೀಶ್ ಎಸ್.ಇಂಜಾಡಿ ಕುಕ್ಕೆ ಸುಬ್ರಹ್ಮಣ್ಯ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

\https://www.vijayavani.net/distribution-of-facilities-to-padyaru-school-students

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net