ಕೆಎಂ ದೊಡ್ಡಿ ಆಸ್ಪತ್ರೆಗೆ ಜಿ.ಮಾದೇಗೌಡ ಸ್ಥಳಾಂತರ: ಆರೋಗ್ಯ ಸ್ಥಿರ, ಚಿಕಿತ್ಸೆ ಮುಂದುವರಿಕೆ

g madegowda
Published on

ಮಂಡ್ಯ: ಶ್ವಾಸಕೋಶದ ಸೋಂಕಿಗೆ ಒಳಗಾಗಿ 15 ದಿನಗಳಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಂಸದ, ಹಿರಿಯ ರೈತ ಹೋರಾಟಗಾರ ಡಾ. ಜಿ.ಮಾದೇಗೌಡ ಅವರನ್ನು ಕೆ.ಎಂ.ದೊಡ್ಡಿ ಆಸ್ಪತ್ರೆಗೆ( ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ಸ್ಥಳಾಂತರಿಸಲಾಗಿದೆ.

ಸದ್ಯ ಇಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಸೋಮವಾರ ಮಾದೇಗೌಡರನ್ನು ಕೆಎಂ ದೊಡ್ಡಿ ಆಸ್ಪತ್ರೆಗೆ ಕರೆತಂದಿದ್ದು, ಚಿಕಿತ್ಸೆ ಮುಂದುವರೆದಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಜನರಲ್ ಫಿಜಿಷಿಯನ್ ಡಾ.ರಕ್ಷಿತ್ ಆರ್. ಭಾರದ್ವಾಜ್ ತಿಳಿಸಿದ್ದಾರೆ.

92 ವರ್ಷದ ಹಿರಿಯ ಜೀವ ಮಾದೇಗೌಡರು ವಯೋಸಹಜ ಕಾಯಿಳೆಯಿಂದ ಬಳಲುತ್ತಿದ್ದಾರೆ, ಇತ್ತೀಚಿಗೆ ಶ್ವಾಸಕೋಶ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net