ಫರ್ನೀಚರ್ ಎಕ್ಸ್​ಪೋಗೆ ಚಾಲನೆ: ಒಂದೇ ಸೂರಿನಡಿ ಗುಣಮಟ್ಟದ ಪರಿಕರ ಕಂಡು ಖುಷಿಯಾದ ಗ್ರಾಹಕರು

New Project(1)
Published on

ಬೆಂಗಳೂರು: ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಶುಕ್ರವಾರ “ಫರ್ನೀಚರ್ ಆ್ಯಂಡ್​ ಹೋಮ್​ ಇಂಟೀರಿಯರ್​ ಎಕ್ಸ್​ಪೋ-2022''ಗೆ ಐಪಿಎಸ್​ ಅಧಿಕಾರಿ ಡಾ.ಅಮರ್ ಕುಮಾರ್ ಪಾಂಡೆ ಚಾಲನೆ ನೀಡಿದರು.

ದಿಗ್ವಿಜಯ ನ್ಯೂಸ್​ ಚಾನಲ್​ ಮತ್ತು ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಮತ್ತು ಯುನಿಲೆಟ್​ ಸಹಭಾಗಿತ್ವದಲ್ಲಿ ಆಯೋಜಿಸಿರುವ ಫರ್ನಿಚರ್ ಆ್ಯಂಡ್​ ಹೋಮ್​ ಇಂಟೀರಿಯರ್​ ಎಕ್ಸ್​ಪೋ ಮಾ.4ರಿಂದ ಮಾ.7ರ ವರೆಗೆ ನಡೆಯಲಿದ್ದು, ಮೊದಲ ದಿನವೇ ಎಕ್ಸ್ ಪೋಗೆ ಜನ ಸಾಗರವೇ ಹರಿದು ಬರ್ತಿದೆ.

ಒಂದೇ ಸೂರಿನಡಿ ಇಟಾಲಿಯನ್​ ಡಿಸೈನರ್​ ಸೋಫಾಗಳು, ಕಚೇರಿಗೆ ಬೇಕಾದ ಪೀಠೋಪಕರಣಗಳು, ಕಾರ್ಪೆಟ್​ಗಳು, ಬೆಡ್​ರೂಮ್​ ಸೆಟ್​ಗಳು, ವಾಲ್​ಫ್ರೇಮ್​ಗಳು, ಮಸಾಜ್​ ಚೇರ್ಗಳು, ಮ್ಯಾಟ್ರೆಸೆಸ್​ (ಹಾಸಿಗೆ), ಆರಾಮದಾಯಕ ಸೋಫಾಗಳು, ಡೈನಿಂಗ್​ ಸೆಟ್​ಗಳು, ಗಾರ್ಡನ್​ ಪೀಠೋಪಕರಣಗಳು, ಆರ್ಟಿಫಿಷಿಯಲ್​ ಹೂವುಗಳು, ಡೆಕೋರೇಟಿವ್​ ವಸ್ತುಗಳು, ಟೀಕ್​ವುಡ್​ ಪೀಠೋಪಕರಣಗಳು, ಫ್ರಿಡ್ಜ್, ವಾಷಿಂಗ್​ ಮಷಿನ್​, ಟಿವಿ, ಎಸಿ ಸೇರಿ ಹಕವು ಎಲೆಕ್ಟ್ರಾನಿಕ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇದೆ. ಉತ್ತಮ ಗುಣಮಟ್ಟದ ಫರ್ನೀಚರ್​ಗಳು ಮತ್ತು ಒಳಾಂಗಣ ವಿನ್ಯಾಸದ ಪರಿಕರಗಳು ಒಂದೇ ವೇದಿಕೆಯಲ್ಲಿ ಲಭ್ಯವಿರುವುದನ್ನ ಕಂಡು ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಎಕ್ಸ್​ಪೋ ಬರುವವರಿಗೆ ಉಚಿತ ಪ್ರವೇಶ ಮತ್ತು ಉಚಿತ ಪಾರ್ಕಿಂಗ್ ವ್ಯವಸ್ಥೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net