ನಭಕ್ಕೆ ನೆಗೆಯಲಿದೆ ಹಣ್ಣಿನ ನೊಣ..!

dasara tableau Dharawada
Published on

ಸದೇಶ್ ಕಾರ್ಮಾಡ್ ಮೈಸೂರು
ಇಸ್ರೋದ ಗಗನಯಾನ ಮಿಷನ್ ಮೂಲಕ ಬಾಹ್ಯಾಕಾಶಕ್ಕೆ ನೆಗೆಯಲಿರುವ ಹಣ್ಣಿನ ನೊಣ.., ದೇಶದ ಹೆಮ್ಮೆಯ ದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಎಕ್ಸ್‌ಪ್ರೆಸ್ ರೈಲು.., ಕಿತ್ತೂರು ಕದನ 200ನೇ ವರ್ಷಾಚರಣೆ.., ವಿಜಯನಗರ ಸಾಮ್ರಾಜ್ಯದ ವೈಭವ.. ಸೇರಿದಂತೆ ಹಲವು ಸ್ತಬ್ಧಚಿತ್ರಗಳು ಈ ಬಾರಿಯ ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರತಿಯೊಬ್ಬರ ಕಣ್ಮನ ಸೆಳೆಯಿತು.

ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ಒಟ್ಟು 51 ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ರಾಜ್ಯದ 31 ಜಿಲ್ಲೆಗಳ ಸ್ತಬ್ಧಚಿತ್ರಗಳು, ಇದರ ಜತೆಗೆ ವಿವಿಧ ಇಲಾಖೆಗಳು, ನಿಗಮಗಳು ಹಾಗೂ ಸ್ತಬ್ಧಚಿತ್ರ ಉಪ ಸಮಿತಿಯ ಒಟ್ಟು 20 ಸ್ತಬ್ಧಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಹಣ್ಣಿನ ನೊಣ ವಿಶೇಷತೆ ಏನು ?: ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಮತ್ತು ತಿರುವನಂತಪುರಂನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಆಂಡ್ ಟೆಕ್ನಾಲಜಿ ಸಹಯೋಗದೊಂದಿಗೆ ಇಸ್ರೋದ ಗಗನಯಾನ ಮಿಷನ್‌ನಲ್ಲಿ ಬಾಹ್ಯಾಕಾಶದಲ್ಲಿ ಮೂತ್ರಪಿಂಡ ಕಲ್ಲಿನ ರಚನೆಯನ್ನು ಅಧ್ಯಯನ ಮಾಡಲು ಹಣ್ಣಿನ ನೊಣಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಹಣ್ಣಿನ ನೊಣದ ವಂಶವಾಹಿನಿ ಮಾನವ ವಂಶವಾಹಿನಿಯನ್ನು ಶೇ.77 ರಷ್ಟು ಹೋಲುತ್ತದೆ. ಹಣ್ಣಿನ ನೊಣದ ‘ಮಾಲ್ಷಿಜಿಯನ್ ಟ್ಯುಬ್ಯುಲ್’ ಅಂಗವು ಮಾನವನ ಕಿಡ್ನಿ ಮಾದರಿಯಲ್ಲೇ ಇದೆ. ಹೀಗಾಗಿ ಈ ಪ್ರಯೋಗಕ್ಕೆ ನೊಣ ಗಳನ್ನು ಬಳಸಲಾಗುತ್ತಿದೆ. ಬಾಹ್ಯಾಕಾಶ ಹಾರಾಟದ ಸಮಯದಲ್ಲಿ ಗಗನಯಾತ್ರಿಯ ಮೂತ್ರಪಿಂಡದ ಆರೋಗ್ಯದ ಅಪಾಯಗಳ ಒಳನೋಟಗಳನ್ನು ಅಧ್ಯಯ ಮಾಡಲು ಈ ಪ್ರಯೋಗವನ್ನು ವಿನ್ಯಾಸಗೊ ಳಿಸಲಾಗಿದೆ. ಈ ಪ್ರಯೋಗದ ಸ್ತಬ್ಧಚಿತ್ರವನ್ನು ಧಾರವಾಡ ಜಿಲ್ಲಾ ಪಂಚಾಯಿತಿ ನಿರ್ಮಿಸಿ ಗಮನ ಸೆಳೆಯಿತು.

ಕಿತ್ತೂರು ಕದನ ನಡೆದು 200 ವರ್ಷಗಳನ್ನು ಪೂರೈಸಿದ್ದು, ಇದರ ನೆನಪಿಗೋಸ್ಕರ ಬೆಳಗಾವಿ ಜಿಲ್ಲಾ ಪಂಚಾಯಿತಿ ನಿರ್ಮಿಸಿದ್ದ ‘ಕಿತ್ತೂರು ಕದನ’ ಸ್ತಬ್ಧಚಿತ್ರ ಗಮನ ಸೆಳೆಯಿತು ಯಾದಗಿರಿ ಜಿಲ್ಲೆ- ತಿಂಥಣಿ ಮೌನೇಶ್ವರ ದೇವಾಲಯದ ಸ್ತಬ್ಧಚಿತ್ರ, ಕೊಡಗು- ಭೂ ಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ-ಕಾಳುಮೆಣಸು ತೋಟ, ಆನೆ ಕ್ಯಾಂಪ್, ರಾಯಚೂರು-ಮುದ್ಗಲ್ ಕೋಟೆ, ಗಾಣದಾಳ ಪಂಚಮುಖಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜನಗರ- ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು, ಕೆಎಂಎಫ್- ಕ್ಷೀರ ಭಾಗ್ಯ ಮತ್ತು ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥ ಸ್ತಬ್ಧಚಿತ್ರ ಆಕರ್ಷಿಸಿತು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ- ಮೈಸೂರು ಸ್ಯಾಂಡಲ್ ಸೋಪ್ ಕಿರುಪರಿಚಯ, ವಿಜಯನಗರ- ವಿಜಯನಗರ ಸಾಮ್ರಾಜ್ಯದ ವೈಭವ, ಬೆಂಗಳೂರು ನಗರ- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ವಿಧಾನಸೌಧ, ಬೀದರ್- ಕನ್ನಡ ಪಟ್ಟ ದೇವರು ಮದ್‌ಘನಲಿಂಗ ಚಕ್ರವರ್ತಿ ಚನ್ನಬಸವ ಪಟ್ಟದೇವರು, ಕೊಪ್ಪಳ- ಕಿನ್ನಾಳ ಕಲೆ- ಹುಲಿಗಮ್ಮ ದೇವಿ ದೇವಸ್ಥಾನ, ಹಿರೇ ಬೆಣಗಲ್ ಶಿಲಾ ಸಮಾಧಿ ಮತ್ತು ಇಟಗಿ ಮಹಾದೇವ ದೇವಾಲಯ, ಪ್ರವಾಸೋದ್ಯಮ ಇಲಾಖೆ- ಒಂದು ರಾಜ್ಯ ಹಲವು ಜಗತ್ತು, ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ- ನಿಗಮದ ಉತ್ಪನ್ನಗಳ ಮಾದರಿಯ ಸಬ್ಧಚಿತ್ರ ಜನರ ಗಮನ ಸೆಳೆಯಿತು.

ಉತ್ತರ ಕನ್ನಡ-ಮುರುಡೇಶ್ವರದ ಬೃಹತ್ ಶಿವನ ಮೂರ್ತಿ, ಬೆಂಗಳೂರು ಗ್ರಾಮಾಂತರ- ಹೊಕ್ಕುಂದ ಹೆಗ್ಗುಂದದ ರಾಮ ದೇವರ ಬೆಟ್ಟ, ನಿಜಗಲ್ಲು ದುರ್ಗ, ಬನ್ನಿ ಮಂಗಲ ದೇವಸ್ಥಾನ, ದಾವಣಗೆರೆ-ನಾವು ಮನುಜರು, ಕೋಲಾರ- ವಿಶ್ವವಿಖ್ಯಾತ ಶ್ರೀ ಕೋಟಿಲಿಂಗೇಶ್ವರ ಸ್ವಾಮಿ ದೇವಸ್ಥಾನ, ಕರ್ನಾಟಕ ರೇಷ್ಮೆ ಉದ್ಯಮ ನಿಗಮ- ಕರ್ನಾಟಕ ರೇಷ್ಮೆ ನಮ್ಮ ಹೆಮ್ಮೆ, ಕಾರ್ಮಿಕ ಇಲಾಖೆ- ಕಾರ್ಮಿಕರ ಹಿತರಕ್ಷಣೆ, ಉಡುಪಿ-ಜಿಲ್ಲೆಯ ಸಾಂಸ್ಕೃತಿಕ ವೈಭವ ಮತ್ತು ಕರಾವಳಿಯ ಸೊಬಗು, ಶಿವಮೊಗ್ಗ- ಸೊರಬ ತಾಲೂಕಿನ ಕೋಟಿಪುರ ಕೈತಭೇಶ್ವರ ದೇವಾಲಯ, ಬಳ್ಳಾರಿ-ಕುರುಗೋಡು ದೇವಸ್ಥಾನ, ಬಾಗಲಕೋಟೆ- ರನ್ನನ ಕಾವ್ಯ ಗಾದಾಯುದ್ಧ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ- ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು, ಸಮಾಜ ಕಲ್ಯಾಣ ಇಲಾಖೆ- ಸಮ ಸಮಾಜ ನಿರ್ಮಾಣ, ಹಾವೇರಿ- ಏಲಕ್ಕಿ ಕಂಪಿನ ನಾಡು ಮತ್ತು ಸಂತರು, ಸಾಹಿತಿಗಳ ನೆಲೆಬೀಡು ಸ್ತಬ್ಧಚಿತ್ರ ಎಲ್ಲರ ಕಣ್ಮನ ಸೆಳೆಯಿತು.

ಮಂಡ್ಯ-ರಂಗನತಿಟ್ಟು ಪಕ್ಷಿಧಾಮ ಮತ್ತು ಕೆಆರ್‌ಎಸ್ ಅಣೆಕಟ್ಟೆ, ರಾಮನಗರ-ಜಿಲ್ಲೆಯ ವೈವಿಧ್ಯತೆಗಳು, ಕಲಬುರಗಿ- ತೊಗರಿಯ ಕಣಜ ಕಲಬುರಗಿ ಜಿಲ್ಲೆಯ ಅಭಿವೃದ್ಧಿ, ಕಾವೇರಿ ನೀರಾವರಿ ಅಭಿವೃದ್ಧಿ ನಿಗಮ-ಏಕತೆಯಲ್ಲಿ ಅನೇಕತೆ ಸಾರುವ ಅಣಕಟ್ಟು ಮತ್ತು ಜಲ ಸಂರಕ್ಷಣೆ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ನಿಗಮ-ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ, ವಿಜಯಪುರ- ಬಸವನ ಬಾಗೇವಾಡಿಯ ಮೂಲನಂದಿ ಬಸವೇಶ್ವರ ದೇವಾಲಯ, ದಕ್ಷಿಣ ಕನ್ನಡ- ಕರವಾಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ, ಮೈಸೂರು- ಮಾನವಕುಲದ ಸಮಾನತೆ, ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ, ಬೆಳಗಾವಿ-ಕಿತ್ತೂರು ಕದನದ 200ನೇ ವರ್ಷಾಚರಣೆ, ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ- ಕೃಷಿ ಸರಕುಗಳ ಮೌಲ್ಯವರ್ಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಥೆಯ ಕೊಡುಗೆ-ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ- ಇಲಾಖೆಯ ಕಿರು ಪರಿಚಯ, ಚಿತ್ರದುರ್ಗ- ಚಿತ್ರದುರ್ಗದ ಕೋಟೆ ಮತ್ತು ಗಾಳಿಯಂತ್ರಗಳು, ಚಿಕ್ಕಬಳ್ಳಾಪುರ -ನಂದಿ ರೋಪ್‌ವೇ ಸ್ತಬ್ಧಚಿತ್ರ ಆಕರ್ಷಿಸಿತು.

ಗದಗ-ಗ್ರಾಮಸಭೆ ಮತ್ತು ಹಳ್ಳಿಯ ವಿಧಾನಸಭೆ, ಧಾರವಾಡ- ಇಸ್ರೋ ಗಗನಯಾನದಲ್ಲಿ ಹಣ್ಣಿನ ನೊಣಗಳು, ಭಾರತೀಯ ರೈಲ್ವೆ- ವಂದೇ ಭಾರತ್ ಎಕ್ಸ್‌ಪ್ರೆಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಹೆಣ್ಣು ಭ್ರೂಣ ಹತ್ಯೆ ತಡೆ, ಅಂಧತ್ವ, ಶ್ರವಣ ದೋಷ ನಿವಾರಣೆ, ಹಾಸನ- ವಿಶ್ವ ಪಾರಂಪರಿಕ ತಾಣ ಬೇಲೂರು- ಹಳೇಬಿಡು, ಚಿಕ್ಕಮಗಳೂರು-ತೇಜಸ್ವಿ ವಿಸ್ಮಯ ಲೋಕ, ತುಮಕೂರು- ಔಷಧ ಸಸ್ಯಗಳ ಸಂಜೀವಿನಿ ಪರ್ವತ ಸಿದ್ಧರ ಬೆಟ್ಟ ಮತ್ತು ಬಯಲು ಸೀಮೆಯನ್ನಾಳಿದ ಹೆಮ್ಮೆಯ ಅರಸರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- ಇಲಾಖೆಯ ಯೋಜನೆಗಳು, ವಾರ್ತಾ ಇಲಾಖೆ- ವಿಶ್ವಗುರು ಬಸವಣ್ಣ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ- ನಿಮ್ಮ ಮನೆಯೇ ನಿರಂತರ ಪಾಠ ಶಾಲೆ, ಕೌಶಲ್ಯಾಭಿವೃದ್ಧಿ ಇಲಾಖೆ- ಕೌಶಲ್ಯ ಕರ್ನಾಟಕ, ಸ್ತಬ್ಧಚಿತ್ರ ಉಪ ಸಮಿತಿ-ಸಾಮಾಜಿಕ ನ್ಯಾಯ, ಸ್ತಬ್ಧಚಿತ್ರ ಉಪ ಸಮಿತಿ- ಆನೆ ಬಂಡಿ ಸ್ತಬ್ಧಚಿತ್ರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net