ಗುರು ಶಿಷ್ಯರ ಸೌಹಾರ್ದ ಪುನರ್ಮಿಲನ

blm
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ 1975-76ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಭೇಟಿ ಮಾಡಿ, ಅಂದಿನ ನೆನಪುಗಳ ಸಂಭ್ರಮ ಕ್ಷಣಗಳಿಗೆ ಗುರು ಶಿಷ್ಯರ ಸೌಹಾರ್ದ ಪುನರ್ಮಿಲನ ಕಾರ್ಯಕ್ರಮ ಸಾಕ್ಷಿಯಾಯಿತು. ಶಾಲಾ ಪರಿಸರ, ವ್ಯವಸ್ಥೆ, ಶಿಕ್ಷಣ, ಒಡನಾಟ, ತಮಾಷೆ, ಕೀಟಲೆಗಳ ನೆನಪಿನ ಘಟನೆಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು.

ಸಹಪಾಠಿಗಳು ಪರಸ್ಪರ ಒಗ್ಗೂಡಿ ತಾವು ಕಲಿತ ಶಾಲೆ ಹಾಗೂ ಅಂದು ತರಗತಿಯಲ್ಲಿ ಪಾಠ ಮಾಡಿ ಈಗ ವಯೋವೃದ್ಧರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ತಮ್ಮ ಗುರುಗಳನ್ನು ಬಹಳ ಶ್ರಮ ಪಟ್ಟು ಸಂಪರ್ಕಿಸಿ, ಒಂದು ದಿನ ನಿಗದಿ ಪಡಿಸಿ ಈ ಪುನರ್ಮಿಲನ ಕಾರ್ಯಕ್ರಮ ಆಯೋಜನೆ ಮಾಡಿದ್ದರು.

ತಮ್ಮ ಗುರುಗಳ ಜತೆಯಲ್ಲಿ ಅಂದಿನ ಶಾಲಾ ದಿನಗಳ ಅವಿಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕಿ, ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದ ಅತ್ಯಪೂರ್ವ ಕ್ಷಣ ಇದಾಗಿತ್ತು. ಗುರುಗಳಿಗೂ ಶಿಷ್ಯರಿಗೂ ವರ್ಣಿಸಲು ಅಸಾಧ್ಯವಾದ ಸುಂದರ ಅನುಭವ, ರೋಮಾಂಚನ, ಹಾಗಂತ ಶಿಷ್ಯರು ಸಹಪಾಠಿಗಳು ಸಣ್ಣ ಮಕ್ಕಳೇನಲ್ಲ ಅವರೆಲ್ಲಾ ಈಗ 67-68 ವಯಸ್ಸಿನವರು. ಉದ್ಯೋಗ ಕ್ಷೇತ್ರದಿಂದ ಕೆಲವು ವಯೋನಿವೃತ್ತಿ ಹೊಂದಿದವರು ಇದ್ದರು.

ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ 1975-76ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಗೆ ಅಂದು ಪಠ್ಯವನ್ನು ಬೋಧಿಸಿ ಬದುಕಿಗೆ ಒಳ್ಳೆಯ ದಿಕ್ಕು ತೋರಿಸಿದ ನಿವೃತ್ತ ಪ್ರಾಂಶುಪಾಲರಾದ ಗಣಪತಿ ಭಟ್, ರಾಜಗೋಪಾಲ್, ಕನ್ನಡ ಭಾಷಾ ಪ್ರಾಧ್ಯಾಪಕ ಬಾಲ ಸುಬ್ರಹ್ಮಣ್ಯ ಭಟ್, ಶಿಕ್ಷಕರಾದ ವರದರಾಯ ನಾಯಕ್, ಸದಾನಂದ ಪ್ರಭು ಮತ್ತು ವತ್ಸಲಾ ಟೀಚರ್ ಈ ಅಪರೂಪದ ಕಾರ್ಯಕ್ರಮದಲ್ಲಿ ತಮ್ಮ ಶಿಷ್ಯ ವರ್ಗದ ಜತೆ ಬೆರುತು ಶಿಷ್ಯರನ್ನು ಆಶೀರ್ವದಿಸಿದರು. ಹಿರಿಯ ವಿದ್ಯಾರ್ಥಿಗಳ ತಂಡದಿಂದ ಎಲ್ಲ ಶಿಕ್ಷಕರನ್ನು ಗೌರವಿಸಲಾಯಿತು.

ಅಗಲಿದ ಗುರುಗಳಿಗೆ ನಮನ

ತಮಗೆ ವಿದ್ಯೆ ಕಲಿಸಿ ಇಂದು ಅಗಲಿದ ಕೆಲವೊಂದು ಗುರುಗಳನ್ನು ಹಾಗೂ ತಮ್ಮ ಜತೆಯಲ್ಲಿ ಆಟ ಪಾಠಗಳಲ್ಲಿ ಜತೆಯಾಗಿದ್ದ ಸಹಪಾಠಿಗಳು ಅಗಲಿದವರನ್ನು ನೆನಪಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮತ್ತೆ ಒಂದುಗೂಡಿದ ಹಿರಿಯ ವಿದ್ಯಾರ್ಥಿಗಳು

ಹಿರಿಯ ವಿದ್ಯಾರ್ಥಿಗಳಾದ ನಿತ್ಯಾನಂದ ಹೆಗ್ಡೆ, ಯೋಗೀಶ್ ಕಾಮತ್, ಸುಮಂಗಲಾ ಕಾಮತ್, ನಿತ್ಯಾನಂದ ಹೆಗ್ಡೆ, ಚಂದ್ರಶೇಖರ ರಾವ್, ರಾಮ್ ಮೋಹನ್ ಎಸ್., ದಯಾನಂದ ಸೂಡ, ಜಯಕರ, ರವೀಂದ್ರ ಶೆಟ್ಟಿ, ಮಧುಸೂದನ ಶೆಟ್ಟಿಗಾರ್, ರಾಮಚಂದ್ರ ಕಾಮತ್, ಸದಾನಂದ ಪೈ, ಫೆಡ್ರಿಕ್ ಡಿಲೀಮ, ಶಾಲಿನಿ ಶೆಟ್ಟಿ, ಲೀಲಾವತಿ ಬಳೆಗಾರ್ತಿ, ಶಶಿಕಲಾ ಭಟ್, ಪೃಥ್ವಿರಾಜ್ ಎಸ್.ಪಿ., ಜಯಪ್ರಕಾಶ್, ಸಕಾರಾಮ ಹೆಗ್ಡೆ ಜತೆಯಾಗಿ ಶಿಕ್ಷಕರನ್ನು ಗೌರವಿಸುವ ವಿಶೇಷ ಕಾರ್ಯಕ್ರಮ ನೆರವೇರಿಸಿದರು.

ಹಲವು ವರ್ಷಗಳ ಬಳಿಕ ನಮ್ಮ ಜತೆಯಲ್ಲಿ ಕಲಿತ ಸಹಪಾಠಿಗಳು ಜತೆಯಾಗಿ ವಿದ್ಯೆ ಕಲಿಸಿದ ಶಿಕ್ಷಕರನ್ನು ಭೇಟಿ ಮಾಡಿ ಅವರಿಗೊಂದು ಗೌರವ ಸಲ್ಲಿಸುವ ಅಪರೂಪದ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ತುಂಬಾ ಖುಷಿ ಕೊಟ್ಟಿದೆ. ನಿತ್ಯಾನಂದ ಹೆಗ್ಡೆ, ಹಿರಿಯ ವಿದ್ಯಾರ್ಥಿ ವಿದ್ಯೆ ಕಲಿತು ಉದ್ಯೋಗ ಪಡೆದ ಬಳಿಕ ವಿದ್ಯಾರ್ಥಿಗಳು ಶಾಲೆ ಹಾಗೂ ಶಿಕ್ಷಕರನ್ನು ನೆನಪಿಟ್ಟುಕೊಳ್ಳುವುದೇ ಇಂದಿನ ದಿನದಲ್ಲಿ ಅಪರೂಪ. ಅಂತಹ ಕಾಲಘಟ್ಟದಲ್ಲಿ ಹಿರಿಯ ವಿದ್ಯಾರ್ಥಿಗಳು ನಮ್ಮನ್ನು ಗುರುತಿಸಿ ಗೌರವಿಸಿದ ಕ್ಷಣ ನಿಜಕ್ಕೂ ಅದ್ಭುತ. ಹಿರಿಯ ವಿದ್ಯಾರ್ಥಿಗಳ ಈ ಅಪೂರ್ವ ಕಾರ್ಯಕ್ರಮದಿಂದ ಜನ್ಮ ಸಾರ್ಥಕವಾಗಿದೆ. ವತ್ಸಲಾ ಟೀಚರ್, ನಿವೃತ್ತ ಶಿಕ್ಷಕಿ. https://www.vijayavani.net/the-destruction-of-a-grieving-womans-house-is-condemnable https://www.vijayavani.net/anasuya-hande-receives-farmer-award

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net