

ಹೊನ್ನಾಳಿ: ಪ್ರತಿಭೆಗಳು ಯಾರೊಬ್ಬರ ಸ್ವತ್ತಲ್ಲ. ಶ್ರಮವಹಿಸಿ ಸಾಧಿಸಿದರೆ ಎಲ್ಲರಿಗೂ ಜಯ ಕಟ್ಟಿಟ್ಟ ಬುತ್ತಿ ಎಂದು ಬಿಇಒ ನಂಜರಾಜ್ ತಿಳಿಸಿದರು.
ಪಟ್ಟಣದ ಅಕ್ಕಮಹಾದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಕಸಬಾ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವಿದ್ಯಾರ್ಥಿಯಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅದನ್ನು ನಾವು ಹೆಕ್ಕಿ ತೆಗೆದು ಅವರ ಸಾಧನೆಗೆ ನೀರೆರೆಯಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಅವಕಾಶ ಸಿಕ್ಕಂತಾಗುತ್ತದೆ ಎಂದರು.
ಪಾಲಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಬಿಆರ್‌ಸಿ ತಿಪ್ಪೇಶಪ್ಪ ಮಾತನಾಡಿ, ನಮ್ಮ ದೇಶದಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಆದರೆ, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಪಾಟೀಲ್, ಶ್ರೀಮಠದ ವ್ಯವಸ್ಥಾಪಕ ಎಂಪಿಎಂ ಚನ್ನಬಸವಯ್ಯ, ಶಿಕ್ಷಣ ಸಂಯೋಜಕ ಅಪ್ಸರ್ ಆಹಮದ್, ಮುಖ್ಯಶಿಕ್ಷಕ ಮಂಜಾನಾಯ್ಕ, ಶಂಕರಸ್ವಾಮಿ ಇತರರು ಇದ್ದರು.
ಎಚ್‌ಎನ್‌ಎಲ್ ಪ್ರತಿಭಾ ಕಾರಂಜಿ ಸೆ 14 ಚಿತ್ರ1
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಪಾಟೀಲ್,ಶ್ರೀ ಮಠದ ವ್ಯವಸ್ಥಾಪಕ ಎಂಪಿಎಂ ಚನ್ನಬಸವಯ್ಯ, ಶಿಕ್ಷಣ ಸಂಯೋಜಕ ಅಪ್ಸರ್ ಆಹಮದ್, ಮುಖ್ಯಶಿಕ್ಷಕ ಮಂಜಾನಾಯ್ಕ ಮತ್ತಿತರರಿದ್ದರು.