ಸರ್ವಾಧ್ಯರಿಗೆ ಔಪಚಾರಿಕ ಆಹ್ವಾನ

A formal invitation to Sarvadhya
ತಾಳಿಕೋಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯರಾಗಿ ಆಯ್ಕೆಗೊಂಡ ಡಾ.ಗುರುಪಾದಪ್ಪ ಘೀವಾರಿ ಅವರನ್ನು ಕಸಾಪ ತಾಲೂಕು ಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.
Published on

ತಾಳಿಕೋಟೆ:ಪಟ್ಟಣದಲ್ಲಿ ಅ.1ರಂದು ನಡೆಯಲಿರುವ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯರಾಗಿ ಆಯ್ಕೆಗೊಂಡಿರುವ ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ.ಗುರುಪಾದಪ್ಪ ಘೀವಾರಿ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ಮಂಗಳವಾರ ಸನ್ಮಾನಿಸಿ ಆಹ್ವಾನ ಪತ್ರಿಕೆ ನೀಡಲಾಯಿತು.

ಕಸಾಪ ಹಿರಿಯ ಸದಸ್ಯ, ಪತ್ರಕರ್ತ ಜಿ.ಟಿ.ೂರ್ಪಡೆ ಮಾತನಾಡಿ, ಐತಿಹಾಸಿಕ ತಾಳಿಕೋಟೆ ಪಟ್ಟಣದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ವೈಭವದಿಂದ ನಡೆಸಲು ಜನರು ಮುಂದಾಗಿದ್ದಾರೆ. ಸಾಹಿತಿ ಡಾ.ಗುರುಪಾದಪ್ಪ ಘೀವಾರಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸದ ವಿಷಯ ಎಂದರು.

ಕಸಾಪ ತಾಲೂಕು ಗೌರವಾಧ್ಯ ಎಚ್​.ಎಸ್​.ಪಾಟೀಲ ಮಾತನಾಡಿ, ತಾಳಿಕೋಟೆ ಪಟ್ಟಣ ಕನ್ನಡ ಸಾಹಿತ್ಯದ ಮೂಲಬೇರುವೆಂಬಂತೆ ಅನೇಕ ಕೊಡುಗೆಗಳನ್ನು ನೀಡಿದೆ. ಈ ಬಾರಿ ತಾಳಿಕೋಟೆ ತಾಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ನಂತರ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದ ಸರ್ವಾಧ್ಯರನ್ನಾಗಿ ನಿವೃತ್ತ ಪ್ರಾಚಾರ್ಯ ಡಾ.ಗುರುಪಾದಪ್ಪ ಘೀವಾರಿ ಅವರನ್ನು ಆಯ್ಕೆ ಮಾಡಿರುವುದು ತಾಲೂಕಿನ ಜನರಲ್ಲಿ ಸಂತಸದ ಹೊನಲು ಮೂಡಿಸಿದೆ ಎಂದರು.

ಕಸಾಪ ತಾಲೂಕು ಅಧ್ಯ ಆರ್​.ಎಲ್​.ಕೊಪ್ಪದ ಅವರು ಡಾ.ಗುರುಪಾದಪ್ಪ ಘೀವಾರಿ ಅವರನ್ನು ಸನ್ಮಾನಿಸಿ ಆಮಂತ್ರಣ ಪತ್ರ ನೀಡಿ ಔಪಚಾರಿಕವಾಗಿ ಆಹ್ವಾನಿಸಿದರು.

ಕನ್ನಡ ಸಾಹಿತ್ಯ ಪರಿಷತ್​ನ ಪ್ರೊ.ಐ.ಆರ್​.ಜಾಲವಾದಿ, ಡಾ.ನಜೀರ ಕೋಳ್ಯಾಳ, ಎಸ್​.ವಿ. ಜಾಮಗೊಂಡಿ, ಸಿದ್ದು ಶಿರಶಿ, ಬಿ.ಆರ್​.ಪೋಲೀಸ್​ಪಾಟೀಲ, ಎಂ.ಎಸ್​.ರಾಯಗೊಂಡ, ಪ್ರಭುಗೌಡ ಮದರಕಲ್ಲ, ಜೆಭೀಮ ಮುತ್ತಗಿ, ಪ್ರಭುಗೌಡ ಚೌದ್ರಿ, ಅಂಬಾಜಿ ೂರ್ಪಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net