ಕುಡಿಯುವ ನೀರಿಗೆ ಪರದಾಡಿದ ಕಾಡಾನೆ

12 HANUR 5
ಮಾರ್ಟಳ್ಳಿ ಸಮೀಪದ ಕೀರೆಪಾತಿ ಡ್ಯಾಂಗೆ ಕಾಡಾನೆಯೊಂದು ಆಗಮಿಸಿ ಕುಡಿಯುವ ನೀರಿಗಾಗಿ ಹುಡುಕಾಟ ನಡೆಸುತ್ತಿರುವುದು.
Published on

ಹನೂರು: ತಾಲೂಕಿನ ಮಾರ್ಟಳ್ಳಿ ಸಮೀಪದ ಕೀರೆಪಾತಿ ಡ್ಯಾಂಗೆ ಕಳೆದ ಮೂರ‌್ನಾಲ್ಕು ದಿನಗಳಿಂದ ಕಾಡಾನೆಯೊಂದು ಕುಡಿಯುವ ನೀರಿಗಾಗಿ ಆಗಮಿಸುತ್ತಿದ್ದು, ನೀರಿಲ್ಲದೆ ನಿರಾಸೆಯಿಂದ ಹಿಂತಿಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಶನಿವಾರ ಸಂಜೆ ಸುಮಾರು 6 ಗಂಟೆ ವೇಳೆಯಲ್ಲಿ ಮತ್ತೆ ಆಗಮಿಸಿ ನೀರಿಗಾಗಿ ಹುಡುಕಾಟ ನಡೆಸುತ್ತಿತ್ತು. ಆದರೆ ನೀರಿಲ್ಲದ ಪರಿಣಾಮ ಹಿಂತಿಗುತ್ತಿದ್ದುದನ್ನು ಕಂಡ ಗ್ರಾಮಸ್ಥರು ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಅರಣ್ಯ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿರುವ ಪರಿಣಾಮ ಆನೆಯೊಂದು ಡ್ಯಾಂಗೆ ಆಗಮಿಸಿ ಹುಡುಕಾಟ ನಡೆಸಿ ಹಿಂತಿರುಗುತ್ತಿದೆ. ಸದ್ಯ ಜನರಿಗೆ ಯಾವುದೇ ತೊಂದರೆ ನೀಡುತ್ತಿಲ್ಲ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಡ್ಯಾಂನತ್ತ ಆಗಮಿಸುತ್ತಿರುವ ಆನೆಗೆ ಅರಣ್ಯ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net