ಮನೆಯ ಮಹಡಿ ಮೇಲೆ ಗಾಳಿಪಟ ಹಾರಿಸುವಾಗ ಕೆಳಗೆ ಬಿದ್ದು 11 ವರ್ಷದ ಬಾಲಕ ಸಾವು

New Project(12)
Published on

ಬೆಳಗಾವಿ: ಅಣ್ಣನ ಜತೆ ಮನೆಯ ಮಹಡಿ ಮೇಲೆ ಗಾಳಿಪಟ ಹಾರಿಸುವಾಗ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 11 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬೆಳಗಾವಿ ನಗರದಲ್ಲಿ ಸಂಭವಿಸಿದೆ.

ಉಜ್ವಲ ನಗರದ ತಿರಂಗಾ ಕಾಲನಿ ನಿವಾಸಿ ಅರ್ಮಾನ್ ದಫೆದಾರ್(11) ಮೃತ ದುರ್ದೈವಿ. ಬುಧವಾರ ಅಶೋಕ ನಗರದಲ್ಲಿರುವ ಸಂಬಂಧಿಕರ ಮನೆಗೆ ಕುಟುಂಬಸ್ಥರ ಜತೆ ಬಂದಿದ್ದ ಅರ್ಮಾನ್, ತನ್ನ ಅಣ್ಣನ ಜತೆಗೂಡಿ ಗಾಳಿಪಟ ಹಾರಿಸಲು ಮನೆಯ ತಾರಸಿಗೆ ತೆರಳಿದ್ದ. ಗಾಳಿಪಟ ಹಾರಿಸುವಾಗ ಆಯತಪ್ಪಿ ಕೆಳಗೆ ಬಿದ್ದು, ಗಂಭೀರ ಗಾಯಗೊಂಡಿದ್ದ.

ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net