ದುರ್ಗಾದೇವಿ ಸನ್ನಿಧಿಯಲ್ಲಿ ಪುಷ್ಪಯಾಗ

KDR durga
ಕಡೂರು ಛತ್ರ ಬೀದಿಯಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯಿಂದ ಪ್ರತಿಷ್ಠಾಪನೆಗೊಂಡಿರುವ ಶ್ರೀ ದುರ್ಗಾದೇವಿಗೆ ಪುಷ್ಪಯಾಗ ಕಾರ್ಯಕ್ರಮ ನೆರವೇರಿಸಲಾಯಿತು.
Published on

ಕಡೂರು: ಪಟ್ಟಣದ ಛತ್ರದ ಬೀದಿಯಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯಿಂದ ಪ್ರತಿಷ್ಠಾಪನೆಗೊಂಡಿರುವ ಶ್ರೀ ದುರ್ಗಾದೇವಿಯ ಆಸ್ಥಾನ ಮಂಟಪದಲ್ಲಿ ಶನಿವಾರ ಸಂಜೆ ವಿಶೇಷ ಪುಷ್ಪಯಾಗ ಜರುಗಿತು.

ಭದ್ರಾವತಿ ಜಗನ್ನಾಥ್ ಶರ್ಮಾ ಸಂಗಡಿಗರಿಂದ ಪೂಜೆ ನೆರವೇರಿದವು. ದೇವಿಗೆ ವಿಶೇಷವಾದ ಮಲ್ಲಿಗೆ, ಗುಲಾಬಿ, ಕಣಗಲು ಹೂ, ಸೇವಂತಿಗೆ, ಪತ್ರೆ ಸೇರಿದಂತೆ ವಿವಿಧ ಬಗೆಯ ಬಿಡಿಪುಷ್ಪಗಳನ್ನು ಅರ್ಪಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಾಯಿತು.
ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ, ಭಕ್ತರ ಸಹಕಾರದಿಂದ ದೇವಿಯ ಪೂಜೆ ನೆರವೇರಿಸಲಾಗುತ್ತಿದೆ. ಅ.8ರ ಸಂಜೆ 7 ಗಂಟೆಗೆ ಮಹಿಳೆಯರಿಂದ ಸಹಸ್ರಕುಂಕುಮಾರ್ಚನೆ ಹಮ್ಮಿಕೊಳ್ಳಲಾಗಿದೆ. ಪೂಜಾ ಕಾರ್ಯದಲ್ಲಿ ಭಾಗವಹಿಸುವ ಮಹಿಳೆಯರಿಗೆ ಕುಂಕುಮ ಪ್ರಸಾದದ ಪೂಜಾ ಸಾಮಗ್ರಿಗಳನ್ನು ಸಮಿತಿ ನೀಡಲಿದೆ. ಮಹಿಳೆಯರು ಹೆಸರನ್ನು ಸಮಿತಿಯ ಆಸ್ಥಾನ ಮಂಟಪದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.
ಅ.9ರ ಸಂಜೆ 7ಗಂಟೆಗೆ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ದೀಪೋತ್ಸವದಲ್ಲಿ ಭಾಗವಹಿಸುವ ಮಹಿಳೆಯರು ಮನೆಯಿಂದಲೇ ದೀಪಗಳನ್ನು ತಂದು ಪೂಜಿಸಬೇಕಿದೆ. ಪ್ರತಿನಿತ್ಯ ರಂಗಪೂಜೆ ಹಾಗೂ ದುರ್ಗಾದೀಪ ನಮಸ್ಕಾರದ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಗುತ್ತಿದೆ ಎಂದರು.
ಸಮಿತಿ ಪದಾಧಿಕಾರಿಗಳಾದ ಭದ್ರಿಸ್ವಾಮಿ, ಕೆ.ಪಿ.ಶ್ರೀನಿವಾಸ್, ಪುರಸಭೆ ಸದಸ್ಯ ಯತಿರಾಜ್, ಸೋಮೇಶ್ ಶಿವಮೊಗ್ಗೆ, ಎಚ್.ಆರ್. ದೇವರಾಜ್, ಕೆ.ಸಿ.ವಿಕಾಸ್, ಆಕಾಶ್, ಪಂಗ್ಲಿ ಮಂಜುನಾಥ್, ನಾಗೇಂದ್ರ ಅಗ್ನಿ, ಸಿದ್ದೇಶ್, ಕೆ.ಎಂ.ನೂತನ್, ರಂಗನಾಥ್, ಹುಲಿಕೆರೆ ಮಹೇಶ್, ನಲ್ಲೂರಿ ಸುರೇಶ್, ಪ್ರದೀಪ್, ಗೌತಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net