

ವಿಜಯಪುರ: ಕಾನೂನು ಬಾಹಿರವಾಗಿ ರೈತರ, ಸಂ&ಸಂಸ್ಥೆಗಳ, ಮಠಮಾನ್ಯಗಳ ಜಮೀನು, ಅಲ್ಲದೆ, ಸರ್ಕಾರಿ ಜಮೀನು, ಇತ್ಯಾದಿ ಆಸ್ತಿಗಳ ಉತಾರದಲ್ಲಿ ವಕ್ಪ್ ಆಸ್ತಿ ಎಂದು ನಮೂದಿಸಿರುವುದನ್ನು ತಣ ತೆಗೆದು ಹಾಕುವುದು ಸೇರಿ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ನ. 4 ರಿಂದ ಬೆಳಗ್ಗೆ 11 ಕ್ಕೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ತೆರಳಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ಅರ್ನಿದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ಈಗಾಗಲೇ, ನೋಟಿಸ್ ಕೊಟ್ಟು ಅಥವಾ ಕೊಡದೆ ಉತಾರಗಳಲ್ಲಿ ವಕ್ಫ್ ಆಸ್ತಿ ಎಂದು ಎಂಟ್ರಿ ಮಾಡಿರುವುದನ್ನು ತೆಗೆದು ಹಾಕಬೇಕು. ಉತಾರದ ಯಾವುದೇ ಕಾಲಂದಲ್ಲಿ ಕೂಡ ವಕ್ಫ್ ಅಂತ ಇರಬಾರದು. ಕೇವಲ ರೈತರ ಹೆಸರು ಮಾತ್ರ ಇರಬೇಕು. ಯಾವುದೇ ಆಸ್ತಿಗಳಿಗೆ ಸಂಬಂಧಿಸಿದ ತಕರಾರು ಸಾಮಾನ್ಯ ಕೋರ್ಟ್ಗಳಲ್ಲೆ ಇತ್ಯರ್ಥ ಆಗಬೇಕು, ವಕ್ಫ್ ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸಬಾರದು. ವಕ್ಫ್ ಅದಾಲತ್ ಮಾಡುವುದರಿಂದ ಸರ್ಕಾರಿ ನ್ಯಾಯಾಲಯಕ್ಕೆ ಮಹತ್ವ ಕಡಿಮೆಯಾಗಲಿದ್ದು, ಹೀಗಾಗಿ ಎಲ್ಲಿಯೂ ವಕ್ಫ್ ಅದಾಲತ್ ನಡೆಸಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಸದ್ಯ ವಕ್ಫ್ ಅಂತ ಎಂಟ್ರಿ ಮಾಡಿದ್ದನ್ನು ತೆಗೆದು ಹಾಕುವಂತೆ ಹಾಗೂ ನೋಟಿಸ್ಗಳನ್ನು ಹಿಂಪಡೆಯುವುದು ಮತ್ತು ಮುಂದೆಯೂ ನೋಟಿಸ್ಗಳನ್ನು ನೀಡದಂತೆ ಜಿಲ್ಲಾಧಿಕಾರಿಗಳು ಲಿಖಿತವಾಗಿ ಆದೇಶ ಹೊರಡಿಸಬೇಕು. ವಕ್ಫ್ ಕಾಯ್ದೆಯನ್ನೇ ರದ್ದುಪಡಿಸಬೇಕು. ಹಾಗೂ ಇಡೀ ದೇಶದ ಎಲ್ಲ ರಾಜ್ಯಗಳಲ್ಲಿನ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿ ದೇಶದ ಆಸ್ತಿಯೆಂದು ಸರ್ಕಾರದ ಸುಪರ್ದಿಗೆ ಪಡೆಯಬೇಕು. 1974 ರ ಮತ್ತು ತದನಂತರದ ವಕ್ಫ್ ಗೆಜೆಟ್ ನೋಟಿಫಿಕೇಶನ್ಗಳನ್ನು ಹಿಂಪಡೆಯಬೇಕು. ಸದ್ಯದವರೆಗಿನ ವಕ್ಫ್ ಗಳಿಸಿದ ಆದಾಯಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸುಖಾ ಸುಮ್ಮನೆ ರೈತರಿಗೆ ನೋಟಿಸ್ ನೀಡಿದ ಮತ್ತು ಯಾರದೋ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಎಂಟ್ರಿ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸುವುದು ಸೇರಿ ಹಲವು ಬೇಡಿಕೆಗಳೊಂದಿಗೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಧರಣಿಯಲ್ಲಿ ರಾಜ್ಯ ಮತ್ತು ಕೇಂದ್ರದ ನಾಯಕರುಗಳು, ಭಾಗವಹಿಸಲಿದ್ದು, ಪಾತೀತವಾಗಿ, ರೈತರು, ನಾಗರಿಕರು, ನ್ಯಾಯವಾದಿಗಳು, ಸಂ& ಸಂಸ್ಥೆಗಳ ಪದಾಧಿಕಾರಿಗಳು, ಮಠಾಧೀಶರು, ಹಿಂದೂ ದೇಶಾಭಿಮಾನಿಗಳು, ವ್ಯಾಪಾರಸ್ಥರು, ಕಾರ್ಯಕರ್ತರು, ಮುಖಂಡರುಗಳು, ಮಹಿಳೆಯರು ಜಿಲ್ಲೆಯ ಎಲ್ಲ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅರ್ನಿದಿಷ್ಟ ಅವಧಿಯ ಈ ಧರಣಿ ಸತ್ಯಾಗ್ರಹದ ಹೋರಾಟ ಯಶಸ್ವಿಗೊಳಿಸುವಂತೆ ಪ್ರಕಟಣೆಯ ಮೂಲಕ ಯತ್ನಾಳ ಕರೆ ನೀಡಿದ್ದಾರೆ.