ಹಿಂದಿ ಭಾಷೆ ವಿಶ್ವಮಾನ್ಯ, ಐದು ದಿನಗಳ ವಿಶೇಷ ಹಿಂದಿ ಯುವ ಬರಹಗಾರರ ಶಿಬಿರ ಸಮಾರೋಪದಲ್ಲಿ ಡಾ. ವಿದ್ಯಾಕುಮಾರ್

mng_19 may hindi
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಕೇಂದ್ರೀಯ ಹಿಂದಿ ನಿರ್ದೇಶನಾಲಯ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟ ಸಹಭಾಗಿತ್ವದಲ್ಲಿ ಐದು ದಿನಗಳ ಕಾಲ ನಡೆದ ಹಿಂದಿ ಯುವ ಬರಹಗಾರರ ಶಿಬಿರ ಸಮಾರೋಪಗೊಂಡಿತು.
Published on

ಮಂಗಳೂರು: ಭಾರತದಲ್ಲಿ ಹಿಂದಿ ರಾಜ್ಯಭಾಷಾ ಸ್ಥಾನ ಪಡೆದಿದ್ದು, ವಿಶ್ವದ ಮೂಲೆ ಮೂಲೆಗೂ ಹಿಂದಿ ಭಾಷೆಯ ಸಾರ ತಲುಪಿದೆ. ಈ ಮೂಲಕ ಹಿಂದಿ ಭಾಷೆ ವಿಶ್ವಮಾನ್ಯವಾಗಿದೆ ಎಂದು ಮೂಡುಬಿದ್ರೆ ಮಹಾವಿರ ಕಾಲೇಜು ನಿವೃತ್ತ ಪ್ರಾದ್ಯಾಪಕ ಡಾ. ವಿದ್ಯಾಕುಮಾರ್ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಕೇಂದ್ರೀಯ ಹಿಂದಿ ನಿರ್ದೇಶನಾಲಯ, ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶದ ಸಹಭಾಗಿತ್ವದಲ್ಲಿ ಐದು ದಿನಗಳ ಕಾಲ ನಡೆದ ಹಿಂದಿ ಯುವ ಬರಹಗಾರರ ಶಿಬಿರ ಸಮಾರೋಪದಲ್ಲಿ ಮಾತನಾಡಿದರು.

ಭಾಷೆ ಎಂಬುವುದು ಸಂಪವಹನ ಮಾಧ್ಯಮ ಮಾತ್ರವಲ್ಲದೆ ಸಂಸ್ಕೃತಿ ಜನಾಂಗಗಳನು ಒಗ್ಗೂಡಿಸುವ ಕೆಲಸ ಮಾಡುತ್ತದೆ.

ದೇಶದಲ್ಲಿ ಹಿಂದಿ ಅತಿಹೆಚ್ಚಿನ ಜನರು ಹಿಂದಿ ಭಾಷೆ ಮಾತನಾಡಬಲ್ಲವರಾಗಿದ್ದಾರೆ. ಹಾಗಾಗಿ ಹಿಂದಿ ಭಾಷೆ ಮಾತನಾಡುವುದಕ್ಕೆ ಯಾವುದೇ ರೀತಿಯ ಸಂಕೋಚ ಇರಕೂಡದು. ವಿದ್ಯಾರ್ಥಿಗಳನ್ನು ಲೇಖಕರನ್ನಾಗಿ ಪ್ರೇರೇಪಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಲೇಖನದ ವಸ್ತು, ವಿಷಯಗಳು, ನಮ್ಮ ಸಂಸ್ಕೃತಿ-ಪರಂಪರೆ ವಿಚಾರವಾಗಿ ಲೇಖನಗಳಲ್ಲಿ ಅಳವಡಿಸುವುದು ಹೇಗೆ ಎನ್ನುವುದನ್ನು ತಿಳಿಸಿ, ಅವರನ್ನು ಪರಿಪಕ್ವರನ್ನಾಗಿ ಮಾಡಲಾಗುತ್ತದೆ. ಸೃಜನಾತ್ಮತೆಗೆ ಪ್ರೋತ್ಸಾಹ ನೀಡುವುದು ಶಿಬಿರದ ಮುಖ್ಯ ಉದ್ದೇಶ ಎಂದರು.

ವಿವಿ ಕಾಲೇಜಿನ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ಮಾತನಾಡಿ, ಭಾಷೆ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ನಾವು ಹೆಚ್ಚು ಭಾಷೆ ತಿಳಿದಷ್ಟು ಜ್ಞಾನವೂ ಹೆಚ್ಚಾಗಿ ವಿಸ್ತಾರಗೊಳ್ಳುತ್ತದೆ. ಹಿಂದಿ ಭಾಷಾ ಕಾರ್ಯಗಾರದಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇಲ್ಲಿ ಕಲಿತಂತಹ ವಿಷಯವನ್ನು ಮುಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸದುಪಯೋಗಪಡಿಸಿಕೊಳ್ಳುವುದು ಅಗತ್ಯ ಎಂದರು.

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಕೇಂದ್ರೀಯ ಹಿಂದಿ ನಿರ್ದೇಶನಾಲಯ ಅಧಿಕಾರಿ ಪ್ರದೀಪ್ ಕುಮಾರ್, ಕರ್ನಾಕಟ ವಿವಿ ನಿವೃತ್ತ ಹಿಂದಿ ಪ್ರಾಧ್ಯಾಪಕ ಪ್ರೊ. ಪ್ರಭಾ ಭಟ್, ಡಿವಿ ಮೋರ್ಕರ್ ಕಾಲೇಜು ಪುಣೆ ಇಲ್ಲಿನ ಹಿಂದಿ ಪ್ರಾದ್ಯಾಪಕ ಪ್ರೋ. ಈಶ್ವರ್ ಪವಾರ್, ಕಾರ್ಯಕ್ರಮ ಸಂಯೋಜಕ ಡಾ. ನಾಗರತ್ನ ಎನ್ ರಾವ್, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮ ಟಿ ಆರ್, ನಿವೃತ್ತ ಉಪನ್ಯಾಸಕಿ ಡಾ. ಸುಧಾ ಭಟ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

----------

ವಿದೇಶಾಲಯದ ವತಿಯಿಂದ ಮಂಗಳೂರಿನಲ್ಲಿ ಮಾಡುತ್ತಿರುವ ಪ್ರಥಮ ಕಾರ್ಯಕ್ರಮ ಯಶಸ್ವಿಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕೇಂದ್ರೀಯ ವಿದೇಶಾಲಯ ಮಂಗಳೂರು ವಿಶ್ವವಿದ್ಯಾನಿಲಯದ ಜೊತೆ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕಾಗಿ ಪ್ರಯತ್ನಿಸುತ್ತೇವೆ.

ಪ್ರದೀಪ್ ಕುಮಾರ್ ಠಾಕೂರು, ಅಧಿಕಾರಿ, ಕೇಂದ್ರೀಯ ಹಿಂದಿ ನಿರ್ದೇಶನಾಲಯ- ದೆಹಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net