ಜನರಿಂದ ಬಿಜೆಪಿಗೆ ತಕ್ಕ ಉತ್ತರ

LAXMAN SAVADI
Published on

ಅಥಣಿ ಗ್ರಾಮೀಣ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಯಿಂದ ಉತ್ತರ ಕರ್ನಾಟಕದ ಜನರು ಮುಂಬರುವ ದಿನಗಳಲ್ಲಿ ಬಿಜೆಪಿಗೆ ಸಂದರ್ಭಕ್ಕೆ ಅನುಸಾರವಾಗಿ ಉತ್ತರ ಕೊಡುತ್ತಾರೆ ಎಂದು ಶಾಸಕ

ಲಕ್ಷ್ಮಣ ಸವದಿ ಮಾರ್ಮಿಕವಾಗಿ ಹೇಳಿದರು.
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಸೋಮವಾರ ಅಮ್ಮಾಜೇಶ್ವರಿ ಕೊಟ್ಟಲಗಿ ಏತ ನೀರಾವರಿ ಯೋಜನೆಯ ಪಂಪ್​ಹೌಸ್​ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಉತ್ತರ ಕರ್ನಾಟಕದ ನಾಯಕರಿಗೆ ಬಿಜೆಪಿಯಿಂದ ಅನ್ಯಾಯವಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನಾನು ಕಾಂಗ್ರೆಸ್​ ಪದ ಸದಸ್ಯ. ಬೇರೆ ಪದ ವಿದ್ಯಮಾನಗಳು ನನಗೆ ಸಂಬಂಧಿಸಿದ್ದಲ್ಲ. ಬಿಜೆಪಿಯಲ್ಲಿ ಏನೇ ಆದರೂ ಅದು ಅವರಿಗೆ ಬಿಟ್ಟಿದ್ದು. ಯತ್ನಾಳ ಉಚ್ಚಾಟನೆ ಉತ್ತರ ಕರ್ನಾಟಕ ಜನರಲ್ಲಿ ಚಿಂತನೆ ಮೂಡಿಸಿದೆ. ಸಂದರ್ಭಕ್ಕೆ ತಕ್ಕ ಉತ್ತರ ಬಿಜೆಪಿಗೆ ನೀಡುತ್ತಾರೆ ಎಂದು ಯತ್ನಾಳ ಉಚ್ಛಾಟನೆ ಪರೋವಾಗಿ ಖಂಡಿಸಿದರು.

ಕೇಂದ್ರ ಸರ್ಕಾರದ ವಕ್ಫ್​ ಕಾನೂನಿಗೆ ತಿದ್ದುಪಡಿ ವಿಚಾರವಾಗಿ ಮಾತನಾಡಿ, ವಕ್ಫ್​ ಎಂಬುವುದು ಮುಗಿದು ಹೋಗಿದೆ. ಎನ್​ಡಿಎ ಸರ್ಕಾರ ಬಿಟ್ಟು ಎಲ್ಲ ಪಗಳು ಕೂಡ ವಿರೋಧ ಮಾಡಿವೆ. ಎನ್​ಡಿಎ ಸರ್ಕಾರಕ್ಕೆ ಬಹುಮತ ಇರೋದರಿಂದ ಕಾನೂನು ತಿದ್ದುಪಡಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಸಾಧಕ&ಬಾಧಕ ಬಗ್ಗೆ ಗೊತ್ತಾಗಲಿದೆ. ಕೆಲವು ವರಿಷ್ಠರು ನ್ಯಾಯಾಲಯಕ್ಕೆ ಹೋಗುವ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಶೀತಲಗೌಡ ಪಾಟೀಲ, ಅಮೋ ಖೋಬ್ರಿ, ಶಾಂತಿನಾಥ ನಂದೇಶ್ವರ, ಕುಮಾರ ನೇಮಗೌಡ, ಮುತ್ತಪ್ಪ ಹಿಡಕಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net